Select Your Language

Notifications

webdunia
webdunia
webdunia
webdunia

ಕೊಡಗಿನ ಬೆಡಗಿ ಬಿಲ್‌ಗೇಟ್ಸ್ ಪತ್ನಿಯಾದಾಗ

ಕೊಡಗಿನ ಬೆಡಗಿ ಬಿಲ್‌ಗೇಟ್ಸ್ ಪತ್ನಿಯಾದಾಗ
ಬೆಂಗಳೂರು , ಮಂಗಳವಾರ, 16 ಆಗಸ್ಟ್ 2016 (10:53 IST)
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಕನ್ನಡಿಗರಿಗೆ ನೆನಪಾಗಿದ್ದಾರೆ. ಬಿಲ್‌ಗೇಟ್ಸ್ ನಿಜಜೀವನದಲ್ಲಿ ಅವರ ಹೆಂಡತಿ ಮೆಲಿಂಡಾ ಫ್ರೆಂಚ್ ಆಗಿರಬಹುದು. ಆದ್ರೆ ಇಲ್ಲೊಬ್ಬ ಬಿಲ್ ಗೇಟ್ಸ್ ಹುಟ್ಟುಕೊಂಡಿದ್ದಾನೆ.  ಕನ್ನಡಕ್ಕೆ ಪರಿಚಯವಾಗುತ್ತಿರುವ ಬಿಲ್‌ಗೇಟ್ಸ್ ಕೊಡಗಿನ ಈ ಹುಡಿಗಿಯ ಸಂಗಾತಿಯಾಗಲಿದ್ದಾರೆ. ಈ ಕುರಿತು ಒಂದು ವರದಿ.

 
ಕೊಡಗು ಮೂಲದ ಮೇಘನಾ ಅಪ್ಪಯ್ಯ ನಿಮಗೆ ನೆನಪಿರಬಹುದು. ಇದೀಗ ಅವರು ಬಿಲ್‌ಗೇಟ್ಸ್ ಚಿತ್ರದ ನಾಯಕಿಯಾಗುತ್ತಿದ್ದಾರೆ. ಬಿಡುಗಡೆಯ ಮುನ್ನವೇ ಮತ್ತೊಂದು ಚಿತ್ರದ ನಾಯಕಿಯಾಗುತ್ತಿರುವುದು ಅವರ ಮತ್ತೊಂದು ವಿಶೇಷ.
 
ಬಣ್ಣದ ಲೋಕದಿಂದ ಬರದೇ ಇದ್ರು, ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆಹಾಕಿದವರು.. ಅಲ್ಲದೇ ಪ್ರತಿಷ್ಟಿತ ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು ಮೇಘನಾ.
 
ಮಾಡೆಲಿಂಗ್ ನಲ್ಲಿರುವಾಗಲೇ ಅವಕಾಶಕ್ಕಾಗಿ ಕಾಯುತ್ತಿದ್ದ ಮೇಘನಾ, ನಿರ್ದೇಶಕ ವಿನೋದ ಅವರು ಪರಿಚಿತರಾದರು. ಈ ಬಗ್ಗೆ ನಿರ್ದೇಶಿಸುತ್ತಿರುವ ಚಿತ್ರದ ಬಗ್ಗೆ ಹೇಳಿದ್ರಂತೆ. ಮೊದಲು ಕಥೆ ಕೇಳಿದೆ. ಮಾಡೆಲಿಂಗ್ ಬದುಕು ನಟನೆಯತ್ತ ಸಾಗಿತು ಎನ್ನುತ್ತಾರೆ.
 
ಇದೀಗ ಅವರು ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ಬಿಲ್ ಗೇಟ್ಸ್ ಚಿತ್ರಕ್ಕೆ ಹಾರಿದ್ದಾರೆ. ಉದ್ಯೋಗ ಅರಸಿ ಹಳ್ಳಿಯಿಂದ ಬಂದ ಬಿಲ್ ಗೇಟ್ಸ್ ನಂತಾಗುವ ಕನಸು, ಹಾಗಾದ್ರೆ ಆತನ ಕನಸು ನನಸಾಗುತ್ತಾದೆಯೋ ಇಲ್ಲವೋ ಎನ್ನುವುದು ಚಿತ್ರದ ಒನ್ ಲೈನ್ ಸ್ಟೋರಿ,

ಈ ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ, ಕಿರುತೆರೆ ನಟ ಶಿಶಿರ ಚಿತ್ರದ ನಾಯಕ, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ ಮೇಘನಾ ಅಪ್ಪಯ್ಯ ಮತ್ತು ರೋಜಾ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಶಿವಕುಮಾರ್ ಸ್ವಾಮೀಜಿಗಳಿಂದ 'ದೊಡ್ಮನೆ ಹುಡುಗ' ಆಡಿಯೋ ರಿಲೀಸ್