Select Your Language

Notifications

webdunia
webdunia
webdunia
webdunia

ಮದುವೆಯಾಗಿದ್ದರೂ, ಆಕೆ ಈ ನಟನ ಪತ್ನಿಯಲ್ಲವಂತೆ!

ಮದುವೆಯಾಗಿದ್ದರೂ, ಆಕೆ ಈ ನಟನ ಪತ್ನಿಯಲ್ಲವಂತೆ!
NewDelhi , ಶನಿವಾರ, 1 ಏಪ್ರಿಲ್ 2017 (09:31 IST)
ನವದೆಹಲಿ: ದೀಪಕ್ ತಿಜೋರಿ. 90 ರ ದಶಕದಲ್ಲಿ ಜನಪ್ರಿಯನಾಗಿದ್ದ ಬಾಲಿವುಡ್  ನಟ. ತೆರೆಯ ಮೇಲೆ ಹೀರೋ ಆದವರ ನಿಜ ಜೀವನ ಅಷ್ಟೇ ಸುಂದರವಾಗಿರುವುದಿಲ್ಲ ಎನ್ನುವುದಕ್ಕೆ ಇವರು ಮತ್ತೊಂದು ಸಾಕ್ಷಿ.

 

ದೀಪಕ್ ಶಿವಾನಿ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ ಇಷ್ಟು ವರ್ಷಗಳಾದ ಮೇಲೆ ಆಕೆ ತನ್ನ ಪತ್ನಿಯೇ ಅಲ್ಲ ಎಂಬ ಅಂಶವನ್ನು ಅವರು ಹೊರ ಹಾಕಿದ್ದಾರೆ. ಮದುವೆಯಾದ ಮೇಲೂ ಆಕೆ ಪತ್ನಿಯಾಗದಿರಲು ಹೇಗೆ ಸಾಧ್ಯ ಎಂಬ ಅನುಮಾನವೇ? ಇಲ್ಲಿದೆ ಉತ್ತರ.

 
ಶಿವಾನಿ ಜತೆ ದೀಪಕ್ ಗುರ್ ಗಾಂವ್ ನ ಬಂಗ್ಲೆಯೊಂದರಲ್ಲಿ ವಾಸವಾಗಿದ್ದರು. ಆದರೆ ಅಲ್ಲಿ ದೀಪಕ್ ಗೆ ಶಿವಾನಿ ಚಿತ್ರಹಿಂಸೆ ಕೊಡುತ್ತಿದ್ದಳಂತೆ. ಪರಿಣಾಮ ಪ್ರಕರಣ ವಿಚ್ಛೇದನಕ್ಕೆ ತಲುಪಿತು. ಶಿವಾನಿ ತನ್ನ ಗಂಡನಿಂದ ತನಗೆ ಜೀವನಾಂಶ ಕೊಡಿಸುವಂತೆ ಆಗ್ರಹಿಸಿದ್ದಳು.

 
ಆದರೆ ದೀಪಕ್ ಆಕೆ ತನ್ನ ಪತ್ನಿಯೇ ಅಲ್ಲ ಎಂದು ಕೌನ್ಸೆಲರ್ ಬಳಿ ಬಾಯಿಬಿಟ್ಟಿದ್ದಾರೆ. ಶಿವಾನಿ ಈ ಮೊದಲು ಮದುವೆಯಾಗಿದ್ದ ಪತಿಯಿಂದ ವಿಚ್ಛೇದನ ಪಡೆದಿರಲಿಲ್ಲ. ಹಾಗಾಗಿ ಆಕೆ ತನ್ನ ಅಧಿಕೃತ ಪತ್ನಿಯೇ ಅಲ್ಲ ಎಂದು ದೀಪಕ್ ಹೇಳುತ್ತಿದ್ದಾರೆ. ಸದ್ಯಕ್ಕೆ ಈ ಪ್ರಕರಣ ನ್ಯಾಯಾಲಯದಲ್ಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ತಡೆ