Select Your Language

Notifications

webdunia
webdunia
webdunia
webdunia

ರಮೇಶ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ತಡೆ

ರಮೇಶ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ತಡೆ
ಬೆಂಗಳೂರು , ಶುಕ್ರವಾರ, 31 ಮಾರ್ಚ್ 2017 (17:04 IST)
ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ದಕ್ಷಿಣ ಕೊರಿಯಾದ `ಮಿರಾಕಲ್ ಇನ್ ಸೆಲ್ ನಂ7’ ಚಿತ್ರದ ಕಾಪಿರೈಟ್ ಉಲ್ಲಂಘಿಸಿ ನಕಲು ಮಾಡಿದ ಆರೋಪದಡಿ ಚಿತ್ರಕ್ಕೆ ತಡೆ ನೀಡಲಾಗಿದೆ.

ಚಿತ್ರವನ್ನ ಕಿರುತೆರೆಯಲ್ಲೂ ಪ್ರಸಾರ ಮಾಡುವಂತಿಲ್ಲ. ಸಿಡಿ ಮತ್ತು ಡಿವಿಡಿಗಳನ್ನ ಮಾರಾಟ ಮಾಡುವಂತಿಲ್ಲ. ಪ್ರಶಸ್ತಿಗಳಿಗೂ ಪರಿಗಣಿಸದಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.

ರಮೇಶ್ ಅರವಿಂದ್ ಅವರ 100ನೇ ಚಿತ್ರ ಇದಾಗಿದ್ದು, ದಕ್ಷಿಣ ಕೊರಿಯಾದ ಚಿತ್ರ ನಿರ್ಮಾಣ ಸಂಸ್ಥೆ ಕಾಪಿರೈಟ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಹಾಟ್ ಡ್ರೆಸ್ ತೊಟ್ಟು ಫೇಸ್ಬುಕ್ ಲೈವ್`ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಪಾರೂಲ್