Select Your Language

Notifications

webdunia
webdunia
webdunia
webdunia

ಮನೋಜ್ ಬಾಜಪೇಯಿಗೆ ಏಷ್ಯಾ ಪೆಸಿಫಿಕ್ ಅವಾರ್ಡ್ಸ್ ನಲ್ಲಿ ಉತ್ತಮ ನಟ ಪ್ರಶಸ್ತಿ

ಮನೋಜ್ ಬಾಜಪೇಯಿಗೆ ಏಷ್ಯಾ ಪೆಸಿಫಿಕ್ ಅವಾರ್ಡ್ಸ್ ನಲ್ಲಿ ಉತ್ತಮ ನಟ ಪ್ರಶಸ್ತಿ
Mumai , ಶನಿವಾರ, 26 ನವೆಂಬರ್ 2016 (10:00 IST)
ಮುಂಬೈ: ಬಾಲಿವುಡ್ ನಟ ಮನೋಜ್ ಬಾಜಪೇಯಿ 10 ನೇ ಏಷ್ಯಾ ಪೆಸಿಫಿಕ್ ಸ್ಕ್ರೀನ್ ಅವಾರ್ಡ್ ನಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಆಲಿಘರ್ ಚಿತ್ರದ ಪ್ರೊಫೆಸರ್ ಸಿರಾಸ್ ಎಂಬ ಪಾತ್ರಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಬ್ರಿಸ್ಬೇನ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.  2012 ರಲ್ಲೂ ಬಾಜಪೇಯಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು. ಆದರೆ ಅವರು ವಿಜೇತರಾಗಿರಲಿಲ್ಲ. ಆದರೆ ಈ ಬಾರಿ ಅವರ ಅಭಿನಯದ ಬಗ್ಗೆ ತೀರ್ಪುಗಾರರೇ ಹೊಗಳಿದ್ದಾರೆ.

ಭಾರತದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಕೂಡಾ ತೀರ್ಪುಗಾರರ ಪೈಕಿ ಒಬ್ಬರಾಗಿದ್ದರು. ಅವರು ಕೂಡಾ ಬಾಜಪೇಯಿ ಅಭಿನಯವನ್ನು ಕೊಂಡಾಡಿದರು. ಪ್ರಶಸ್ತಿ ಪಡೆದ ಇತರ ಭಾರತೀಯರೆಂದರೆ, ರಮಣ್ ರಾಘವ್ 2.0 ಚಿತ್ರದ ಅಭಿನಯಕ್ಕಾಗಿ ನವಾಜುದ್ದೀನ್, ಲಯನ್ ಚಿತ್ರದ ಅಭಿನಯಕ್ಕಾಗಿ ಸನ್ನಿ ಪವಾರ್ ಕೂಡಾ ಸೇರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮಧುರೈ ದಂಪತಿ ನ್ಯಾಯಾಲಯಕ್ಕೆ ದೂರು