ಮೊನ್ನೆಯಷ್ಟೇ ಮಲ್ಲಿಕಾ ಅರೋರ ಖಾನ್ ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ತನ್ನ ಹೆಸರಿನ ಮುಂದೆ ಸೇರಿಸಿರುವ ಖಾನ್ ಅನ್ನೋ ಪತಿಯ ಹೆಸರನ್ನು ತೆಗೆದು ಹಾಕಿ ಅಂತಾ ಇಂಡಿಯಾ ಗಾಟ್ ಟ್ಯಾಲೆಂಟ್ ತಂಡಕ್ಕೆ ಹೇಳಿದ್ದರು.
ಇದನ್ನೆಲ್ಲಾ ನೋಡಿ ಮಂದಿಯಂತೂ ಇನ್ಮೇಲೆ ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಆರೋರ ಮತ್ತೆ ಒಂದಾಗೋದಿಲ್ಲ ಅಂತಾನೇ ಅಂದುಕೊಂಡಿದ್ದರು. ಆದ್ರೀಗ ಸಿಹಿ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಮಲ್ಲಿಕಾ ಅರೋರ ಹಾಗೂ ಅರ್ಬಾಜ್ ಖಾನ್ ಅವರ ನಡುವಿನ ಸಂಬಂಧ ಇನ್ನೇನು ಸರಿ ಹೋಗೋದೇ ಇಲ್ಲ ಅಂತಾ ಗೊತ್ತಾಗುತ್ತಿದ್ದಂತೆ ಮಲ್ಲಿಕಾ ಅರೋರ ಬಾಂದ್ರಾದಲ್ಲಿರುವ ತನ್ನ ಪತಿಯ ನಿವಾಸದಿಂದ ತಾಯಿ ಮನೆಗೆ ಶಿಫ್ಟ್ ಆಗಿದ್ದರು.
ಮಲ್ಲಿಕಾ ಮನೆ ಬಿಟ್ಟು ಹೋದ ಬಳಿಕ ಅರ್ಬಾಜ್ ಖಾನ್ ಅವರು ಕೂಡ ನಾನು ಮಲ್ಲಿಕಾ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದರು.ಆದ್ರೀಗ ಎರಡು ಕುಟುಂಬಗಳು ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿವೆ.
ಮಲ್ಲಿಕಾ ಅರೋರ ಅವರ ತಾಯಿ ಜೋಸ್ ಹಾಗೂ ಸಹೋದರಿ ಅಮೃತಾ ಅರೋರ ಅವರು ಮಲ್ಲಿಕಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಮಗನೊಂದಿಗೆ ಇನ್ನು ಕೆಲವೇ ದಿನಗಳಲ್ಲಿ ಮಲ್ಲಿಕಾ ಅರೋರ ಅವರು ಪತಿಯ ಮನೆಗೆ ಹೋಗಲಿದ್ದಾರಂತೆ. ಸದ್ಯ ಇಬ್ಬರು ಒಂದಾಗಿರೋದು ಎರಡು ಕುಟುಂಬಗಳಲ್ಲೂ ಸಂತಸ ತಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ