ರಣ್ ಬೀರ್ ಕಪೂರ್ ಅವರಿಂದ ಕತ್ರೀನಾ ಕೈಫ್ ಅವರು ದೂರವಾಗಿದ್ದೇ ತಡ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ತುಂಬಾನೇ ಕ್ಲೋಸ್ ಆಗಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
ಆದ್ರೆ ಈ ರೂಮರ್ಸ್ ಗಾಸಿಪ್ ಗಳಿಗೆ ಸ್ವತಃ ಕ್ಯಾಟ್ ಅವರೇ ತಿಲಾಂಜಲಿ ಇಟ್ಟಿದ್ದಾರೆ. ಮಾಧ್ಯಮಗಳಲ್ಲಿ ಕತ್ರೀನಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ನೂರಾರು ರೀತಿಯಲ್ಲಿ ವರದಿಗಳು ಬಂದಿರೋದಕ್ಕೆ ಕತ್ರೀನಾ ಕೈಫ್ ಅವರು ತುಂಬಾನೇ ಅಪ್ ಸೆಟ್ ಆಗಿದ್ದಾರೆ ಅಂತಾ ಕ್ಯಾಟ್ ಆಪ್ತ ಮೂಲಗಳು ತಿಳಿಸಿವೆ.
ಇನ್ನು ಈ ಗಾಸಿಪ್ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಕತ್ರೀನಾ ಸದ್ಯ ಕೇಳಿ ಬರುತ್ತಿರುವ ಮಾತುಗಳಿಗೆ ಯಾವುದೇ ಆಧಾರವಿಲ್ಲ.ಅದೆಲ್ಲಾ ಶುದ್ಧ ಸುಳ್ಳು. ಯಾರ ಕೂಡಇಂತಹ ಸುಳ್ಳು ಸುದ್ದಿಗಳನ್ನು ನಂಬೋದಕ್ಕೆ ಹೋಗಬೇಡಿ ಅಂತಾ ಹೇಳಿದ್ದಾರೆ.
ಈ ರೀತಿ ಹೇಳುವ ಮೂಲಕ ಗಾಸಿಪ್ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ ಕತ್ರೀನಾ.ಇನ್ನು ಕತ್ರೀನಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರು ಬಾರ್ ಬಾರ್ ದೋಖೋ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ತನ್ನ ಮಾಜಿ ಗೆಳೆಯ ರಣ್ ವೀರ್ ಕಪೂರ್ ಅವರೊಂದಿಗೆ ಜಗ್ಗ ಜಾಸೂಸ್ ಸಿನಿಮಾದಲ್ಲಿಯೂ ಕ್ಯಾಟ್ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ