ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕ್ಯಾಂಪೇನ್ ಹಾಗೂ ಪಿಎಂ ಮೋದಿಯವರ ಮುಂದಾಳತ್ವ ಹಾಗೂ ಮೇಕ್ ಇನ್ ಇಂಡಿಯಾ ತಂತ್ರಜ್ಞಾನದ ಅಳವಡಿಕೆ ಯಿಂದ ಬಾಲಿವುಡ್‌ನ ಕಿಂಗ್ ಖಾನ್ ಶಾರೂಖ್ ಪ್ರಭಾವಿತರಾಗಿದ್ದಾರಂತೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಿಂದ ಮೇಕ್ ಇನ್ ಇಂಡಿಯಾಕ್ಕೆ ಚಾಲನೆ ದೊರತಿದೆ. ಇದು ದೇಶ ಹಾಗೂ ವಿದೇಶಗಳಲ್ಲಿ ಸಾಕಷ್ಟು ಪ್ರಭಾವ ಮೂಡಿಸಿದ್ದು, ಉದ್ಯೋಗವಕಾಶಗಳನ್ನು, ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಸಹಾಯಕಾರಿಯಾಗಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಶಾರೂಖ್ ಖಾನ್ ಹೇಳಿದ್ದಾರೆ.
ನೂತನ ತಂತ್ರಜ್ಞಾನದಿಂದ ನಾನು ಸಾಕಷ್ಟು ಪ್ರಭಾವಿತನಾಗಿದ್ದೇನೆ. ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮ ತಂತ್ರಜ್ಞಾನ ಹೊಂದುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫರ್ನಾಡಿಸ್, ಬಿಜೆಪಿ ಸದಸ್ಯರು ಭಾಗಿಯಾಗಿದ್ದರು.
ಇನ್ನೂ ಇದೇ ವೇಳೆ ಮಾತನಾಡಿರುವ ಶಾರೂಖ್, ನವೆಂಬರ್‌ನಲ್ಲಿ ಚಿತ್ರರಂಗದಿಂದ ಮೇಕ್ ಇನ್ ಇಂಡಿಯಾಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು. ನಮ್ಮ ಗಡಿಗಳಲ್ಲಿ ದೇಶದ ಸಂಸ್ಕೃತಿ, ಸಂಗೀತವನ್ನು ಪಸರಿಸಲು ಭಾರತ ಮುಂದಾಗಿದೆ ಎಂದು ತಿಳಿಸಿದರು.