Select Your Language

Notifications

webdunia
webdunia
webdunia
webdunia

'ಕಬಿಲ್ 'ಚಿತ್ರಕ್ಕಾಗಿ ಅಂಧರನ್ನು ಭೇಟಿ ಮಾಡಲಿರುವ ಹೃತಿಕ್ ರೋಷನ್.

Hrithik Roshan
ಮುಂಬೈ , ಗುರುವಾರ, 28 ಏಪ್ರಿಲ್ 2016 (10:55 IST)
ಮುಂದಿನ ಚಿತ್ರ 'ಕಬಿಲ್'ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರೋ ಹೃತಿಕ್ ರೋಷನ್ ,ಅಂಧರನ್ನು ಭೇಟಿ ಮಾಡಲಿದ್ದಾರೆ. ಕಬಿಲ್ ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ. 
ಅದಕ್ಕಾಗಿ ತಮ್ಮ ಪಾತ್ರಕ್ಕಾಗಿ ಹಲವು ಅಂಧರನ್ನು ಭೇಟಿಯಾಗಲಿದ್ದಾರಂತೆ ಹೃತಿಕ್. ಚಿತ್ರದಲ್ಲಿನ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ಹೃತಿಕ್ ರೋಷನ್ ಮುಂದಾಗಿದ್ದಾರೆ. ಅವರಲ್ಲಿನ ಗುಣಗಳನನ್ನು ತಮ್ಮ ಪಾತ್ರ ಹೇಗೆಲ್ಲ ಅಳವಡಿಸಿಕೊಳ್ಳಬೇಕು ಎಂಬ ಕಾತುರದಲ್ಲಿದ್ದಾರೆ ಹೃತಿಕ್. 
 
ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.
 
ಇನ್ನೂ ಹೃತಿಕ್ ಹಾಗೂ ಕಂಗನಾ ಮಧ್ಯೆ ವಾರ್ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಹೃತಿಕ್ ಮಾಜಿ ಪತ್ನಿ ಸುಸೇನ್ ಕೂಡ ಹೃತಿಕ್‌ರನ್ನು ಬೆಂಬಲಿಸಿದ್ದಾರೆ. 
 
ಅಲ್ಲದೇ ಇದರ ಮಧ್ಯೆ ಹೃತಿಕ್ ಮತ್ತೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂಧನ ಪಾತ್ರದಲ್ಲಿ ಮಿಂಚಲು ಉತ್ಸುಕರಾಗಿದ್ದಾರಂತೆ ಹೃತಿಕ್. ಚಿತ್ರ ಜನೆವರಿ 2017ಕ್ಕೆ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರಧ್ಧಾರನ್ನು ಪ್ರಪೋಸ್ ಮಾಡಿಲ್ಲ - ನಟ ಟೈಗರ್ ಶ್ರಾಫ್