ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಚಿತ್ರದ ಸೋಲಿಗೆ ನಟ ಮಹೇಶ್ ಬಾಬು ಜವಾಬ್ದಾರಿವಹಿಸಿಕೊಂಡಿದ್ದಾರೆ. ಚಿತ್ರ ಫ್ಲಾಪ್ ಬಗ್ಗೆ ಮಾತನಾಡಿರುವ ಅವರು ಚಿತ್ರ ಫ್ಲಾಪ್ ಆಗಿರುವುದಕ್ಕೆ ನಾನೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದಿದ್ದಾರೆ.
ಮಹೇಶ್ ಬಾಬು, ಚಿತ್ರದ ಫ್ಲಾಪ್ ಆಗಲು ಚಿತ್ರದ ನಿರ್ದೇಶಕರು ದೂರುವುದು ಸರಿಯಲ್ಲ, ಹೀಗೆ ಅವರು ದೂರುತ್ತಾರೆ ಅಂತ ನಾನು ತಿಳಿದುಕೊಂಡಿಲ್ಲ, ಯಾಕಂದ್ರೆ ಚಿತ್ರ ಫ್ಲಾಪ್ ಆಗವುದಕ್ಕೆ ನಾನು ಸಂಪೂರ್ಣ ಹೊಣೆ ಹೊತ್ತಿದ್ದೇನೆ.
ಚಿತ್ರ ಯಶಸ್ಸು ಅಥವಾ ಸೋಲು ಕಾಣಲು ಹಲವು ಕಾರಣಗಳಿರಬಹುದು.. ನನಾ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದ್ದು ಅಥವಾ ನನ್ನ ಜಡ್ಜವೆಂಟ್ ತಪ್ಪಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರಹ್ಮೋತ್ಸವ' ಚಿತ್ರ ಅಪ್ಪಟ ಕೌಟುಂಬಿಕ ಚಿತ್ರಗಳಲ್ಲಿ ಒಂದಾಗಿದೆ. ಇನ್ನೂ ಚಿತ್ರದಲ್ಲಿ ಮಹೇಶ್ ಬಾಬು, ಹಾಗೂ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ.