Select Your Language

Notifications

webdunia
webdunia
webdunia
webdunia

ಮುಸ್ತಫಾ ರಾಜ್ ಜತೆಗೆ ನಟಿ ಪ್ರಿಯಾಮಣಿ ನಿಶ್ಚಿತಾರ್ಥ

Priyamani Gets Engaged
ಬೆಂಗಳೂರು , ಶನಿವಾರ, 28 ಮೇ 2016 (17:35 IST)
ಸ್ಯಾಂಡಲ್‌ವುಡ್ ನಟಿ ಪ್ರಿಯಾಮಣಿ ಉದ್ಯಮಿ ಮುಸ್ತಫಾ ರಾಜ್ ಜತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ನಟಿ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಚೆನ್ನೈ ಮೂಲದ ಉದ್ಯಮಿ ಮುಸ್ತಾಫಾ ಜತೆಗೆ ಪ್ರಿಯಾಮಣಿ ಈ ವೇಳೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಹಾಜರಿದ್ದರು.. 
 
ಬೆಂಗಳೂರಿನ ಬನಶಂಕರಿಯಲ್ಲಿರುವ ಅವರ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರಿಯಾಮಣಿ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಸರಳವಾಗಿ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ ಕೆಲವೇ ಆಪ್ತರು ಹಾಗೂ ಸ್ನೇಹಿತರು ಸಮಾರಂಭಕ್ಕೆ ಹಾಜರಿದ್ದರು.. 
 
ಕನ್ನಡ , ತಮಿಳು, ಹಿಂದಿ, ತೆಲಗು, ಮಲಯಾಳಂ ಚಿತ್ರಗಳಲ್ಲಿ ಪ್ರಿಯಾಮಣಿ ನಟಿಸಿದ್ದರು. ಕುಟುಂಬದವರ ಸಮ್ಮುಖದಲ್ಲಿ ಪ್ರಿಯಾಮಣಿ ಮುಸ್ತಫಾ ಜತೆ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿರುವುದರಿಂದ ಮದುವೆ ಯಾವ ಸಂಪ್ರದಾಯದಂತೆ ನಡೆಯಲಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾ ಬಾಲನ್ ಅಭಿನಯದ 'ಏಕ್ ಅಲ್ಬೇಲಾ' ಚಿತ್ರದ ಪೋಸ್ಟರ್ ರಿಲೀಸ್