Publish Date: Thu, 01 Mar 2018 (18:20 IST)
Updated Date: Thu, 01 Mar 2018 (18:22 IST)
ಇತ್ತೀಚೆಗೆ ವೆಬ್ ಶೋ ಒಂದರಲ್ಲಿ ಕಾಣಿಸಿಕೊಂಡ ನಟ ಆರ್. ಮಾಧವನ್, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿದೆ, ಪರಿಣಾಮವಾಗಿ ಮಾಧವನ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಎರಡು ತಿಂಗಳು ವಿಶ್ರಾಂತಿ ಪಡೆಯಬೇಕು ಮತ್ತು ಐದು ತಿಂಗಳು ಯಾವುದೇ ಸ್ಟಂಟ್ ಮಾಡಬಾರದು ಎಂದು ವೈದ್ಯರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ರೀತಿಯಾಗಿ ಚಿತ್ರವೊಂದರಲ್ಲಿ ಮಾಧವನ್ ಗಾಯಗೊಂಡಿದ್ದರು ಎಂದು ವರದಿಗಳು ತಿಳಿಸಿವೆ. ಅವರು ದ್ವಿಭಾಷಾ ಕ್ರೀಡಾ ನಾಟಕ ಇರುಧಿ ಸೂತ್ರು (ಹಿಂದಿ ಭಾಷೆಯಲ್ಲಿ ಸಾಲಾ ಖಡೋಸ್) ಚಿತ್ರೀಕರಣದ ಸಮಯದಲ್ಲಿ ಭುಜಕ್ಕೆ ಗಾಯವಾಗಿತ್ತಂತೆ. ಆದರೆ ಅವರು ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿರಲಿಲ್ಲ.
"ಭುಜದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ ... ಹೆೋರಾಟಗಾರ ಮತ್ತೆ ಟ್ರ್ಯಾಕ್‌ನಲ್ಲಿದ್ದಾನೆ.. ನನ್ನ ಬಲಗೈಯಲ್ಲಿ ಯಾವುದೇ ಸ್ಪರ್ಶದ ಭಾವನೆ ಇಲ್ಲ ಹಾಹಾಹಾ" ಎಂದು ಅವರು ಟ್ವೀಟ್ ಮಾಡಿದರು.