ಸಲ್ಮಾನ್ ಖಾನ್ ಅವರು ಇದೇ ವರ್ಷ ತನ್ನ ಗೆಳತಿ ಲುಲಿಯಾ ವೆಂಟರ್ ಅವರನ್ನು ವಿವಾಹವಾಗುತ್ತಾರೆ ಅನ್ನೋ ಬಗ್ಗೆ ಬಾಲಿವುಡ್ ಅಂಗಳದಲ್ಲಿ ನಾನಾ ರೀತಿಯ ಸುದ್ದಿಗಳು ಕೇಳಿ ಬರುತ್ತಲೇ ಇವೆ.
ಇನ್ನು ಸಲ್ಮಾವನ್ ಖಾನ್ ಅವರು ಇದೇ ವರ್ಷ ಅಂದ್ರೆ ತಮ್ಮ ಹುಟ್ಟುಹಬ್ಬ ಡಿಸೆಂಬರ್ 27 ರಂದು ಲುಲಿಯಾ ಅವರನ್ನು ವಿವಾಹವಾಗುತ್ತಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಇನ್ನು ಮೊನ್ನೆ ನಡೆದ ಪ್ರೀತಿ ಝಿಂಟಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲೂ ಲುಲಿಯಾ ವೆಂಟರ್ ಹಾಗೂ ಸಲ್ಲು ಭಾಯಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಜೋರಾಗಿ ಕೇಳಿ ಬರುತ್ತಿದೆ.
ಹೀಗಿರುವಾಗಲೇ ಸಲ್ಮಾನ್ ಖಾನ್ ಅವರು ತಮ್ಮ ಮೂವರು ಬಾಡಿಗಾರ್ಡ್ ಗಳನ್ನು ಲುಲಿಯಾ ಅವರ ರಕ್ಷಣೆಗಾಗಿ ಕಳುಹಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಲುಲಿಯಾ ಅವರು ಒಬ್ಬರೇ ಮನೆಯಿಂದ ಹೊರಗಡೆ ಬರೋದು ಸಲ್ಲುಗೆ ಇಷ್ಟವಿಲ್ಲವಂತೆ. ಹಾಗಾಗಿ ಅವರ ಸಹಾಯಕ್ಕಾಗಿ ಮೂವರು ಬಾಡಿಗಾರ್ಡ್ ಗಳನ್ನು ಕಳುಹಿಸಿದ್ದಾರಂತೆ.
ಸಲ್ಮಾನ್ ಖಾನ್ ಅವರು ಲುಲಿಯಾ ಬಗ್ಗೆ ಇಷ್ಟೊಂದು ಕೇರ್ ಮಾಡುತ್ತಿರೋದು ನೋಡಿದ್ರೆ ಸಲ್ಲು ಭಾಯಿ ಶೀಘ್ರದಲ್ಲೇ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುತ್ತಾರೆ ಅನ್ನೋದು ಖಚಿತವಾಗುತ್ತಿದೆ.ಆದ್ರೆ ಇದಕ್ಕೆಲ್ಲಾ ಅವರೇ ಉತ್ತರ ನೀಡಬೇಕು.ಏನೇ ಆದ್ರೂ ಸಲ್ಲು ಇನ್ನಾದರೂ ಮದುವೆಯಾಗಲಿ ಅನ್ನೋದು ಅಭಿಮಾನಿಗಳ ಹಾರೈಕೆ.