ಶಾರುಖ್ ಖಾನ್ ಆಗಾಗ್ಗೆ ಮಗ ಅಬ್ ರಾಮ್ ನ ಕೀಟಲೆಗಳು ಅವನ ತುಂಟತನಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಮಗನನ್ನು ಬಿಟ್ಟು ಒಂದು ದಿನ ಇರೋದು ಅಂದ್ರೂ ಅವರಿಗೆ ಅದು ಬಹು ದೊಡ್ಡ ಸವಾಲು.ಆದ್ರೆ ಕಳೆದೆರಡು ದಿನಗಳಿಂದ ಮಗ ಅಬ್ ರಾಮ್ ಶಾರುಖ್ ಖಾನ್ ಅವರನ್ನು ನಿದ್ದೆ ಮಾಡೋದಕ್ಕೇನೆ ಬಿಡುತ್ತಿಲ್ಲವಂತೆ.
ಅಂದ್ಹಾಗೆ ಶಾರುಖ್ ಖಾನ್ ಹಾಗೂ ಅಬ್ ರಾಮ್ ನಿದ್ದೆ ಮಾಡದೇ ಇರೋದಕ್ಕೆ ಕಾರಣ ನಟ ಆಮೀರ್ ಖಾನ್. ಆಮೀರ್ ಏನ್ ಮಾಡಿದ್ರು ಅಂತಾ ಯೋಚಿಸುತ್ತಿದ್ದೀರಾ. ಮೊನ್ನೆ ಕಿಂಗ್ ಖಾನ್ ತಮ್ಮ ನಿವಾಸ ಮನ್ನತ್ ನಲ್ಲಿ ಡಿನ್ನರ್ ಪಾರ್ಟಿಯೊಂದನ್ನು ಆಯೋಜಿಸಿದ್ದರು.
ಅದಕ್ಕೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರಿಗೂ ಆಹ್ವಾನ ನೀಡಿದ್ದರು ಕಿಂಗ್ ಕಾನ್. ಪಾರ್ಟಿಗೇನೋ ಆಮೀರ್ ಬಂದರು. ಹಾಗಂಥ ಅವರು ಹಾಗೇ ಬಂದಿಲ್ಲ ಬರೋವಾಗ ಶಾರುಖ್ ಪುತ್ರ ಅಬ್ ರಾಮ್ ಗೆ ಕೆಲ ಆಟಿಕೆಗಳನ್ನು ತಂದಿದ್ದಾರೆ.ಆದ್ರೆ ಆಟಿಕೆ ಕೈಗೆ ಸಿಕ್ಕಿದ ಮೇಲೆ ಅವನು ನಿದ್ದೇನೇ ಮಾಡುತ್ತಿಲ್ಲವಂತೆ. ರಾತ್ರಿಯಿಡಿ ಅದರ ಜೊತೇನೇ ಆಡುತ್ತಿದ್ದಾನಂತೆ.
ಇನ್ನು ಮಗನಿಗೆ ಆಟಿಕೆ ತಂದುಕೊಟ್ಟಿರೋದಕ್ಕೆ ಆಮೀರ್ ಖಾನ್ ಅವರಿಗೆ ಟ್ವೀಕ್ ಮೂಲಕ ಶಾರುಖ್ ಖಾನ್ ಅವರು ಧನ್ಯವಾದ ಹೇಳಿದ್ದಾರೆ.ಅಲ್ಲದೇ ಆಟಿಕೆ ಬಂದ ಮೇಲೆ ಅಬ್ ರಾಮ್ ರಾತ್ರಿಯಿಡೀ ನಿದ್ದೆ ಮಾಡುತ್ತಿಲ್ಲ. ತನಗೂ ನಿದ್ದೆ ಮಾಡೋದಕ್ಕೆ ಆತ ಬಿಡುತ್ತಿಲ್ಲ ಅಂತಾ ಶಾರುಖ್ ಟ್ವೀಟ್ ಮಾಡಿದ್ದಾರೆ.