ಮುಂಬೈ: ನಟಿ, ನಿರ್ದೇಶಕಿ ಕೊಂಕಣ್ ಸೇನ್ ಗೆ 18 ನೇ ಮಾಮಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯೊಂದು ಲಭಿಸಿದೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ “ಎ ಡೆತ್ ಇನ್ ದ ಗುಂಜ್” ಗೆ ಉತ್ತಮ ಮಹಿಳಾ ನಿರ್ದೇಶಕಿ ಪ್ರಶಸ್ತಿ ಗೌರವ ಲಭಿಸಿದೆ.
ಈ ಚಿತ್ರ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು. ಲಿಂಗ ಸಮಾನತೆಯನ್ನು ಪ್ರತಿನಿಧಿಸುವ ಉತ್ತಮ ಚಿತ್ರವಾಗಿ ‘ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ”ಗೆ ಆಯ್ಕೆಯಾಗಿದೆ. ಅಲಂಕೃತ ಶ್ರೀವಾಸ್ತವ ನಿರ್ದೇಶನದ ಚಿತ್ರದಲ್ಲಿ ಕೊಂಕಣಾ ಸೇನ್ ಕೂಡಾ ನಟಿಸಿದ್ದಾರೆ.
ಇನ್ನೂ ಹಲವು ವಿಭಾಗಗಳಲ್ಲಿ ದೇಶ, ವಿದೇಶದ ಚಿತ್ರಗಳು ಪ್ರಶಸ್ತಿ ಪಡೆದುಕೊಂಡಿದೆ. ಪ್ರಶಸ್ತಿ ಕಾರ್ಯಕ್ರಮವು ಬಾಂದ್ರಾದ ರಂಗ ಮಂದಿರ ವೇದಿಕೆಯಲ್ಲಿಬಾಲಿವುಡ್ ನ ಹಲವು ಗಣ್ಯರ ನಡುವೆ ನಡೆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ