Webdunia - Bharat's app for daily news and videos

Install App

ಸದ್ದಿಲ್ಲದೇ ಬಂದು ಕೊರಗಜ್ಜನ ಕೋಲ ನೋಡಲು ಬಂದ ಕತ್ರಿನಾ ಕೈಫ್, ಕೆಎಲ್ ರಾಹುಲ್

Krishnaveni K
ಸೋಮವಾರ, 15 ಜುಲೈ 2024 (09:55 IST)
ಮಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಕುಟುಂಬ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಕುಟುಂಬಸ್ಥರು ಕುತ್ತಾರು ಕೊರಗಜ್ಜನ ಕೋಲದಲ್ಲಿ ಭಾಗಿಯಾಗಿದ್ದಾರೆ. ಆದರೆ ತಾವು ಬರುತ್ತಿರುವ ವಿಚಾರ ಯಾರಿಗೂ ತಿಳಿಯದ ಹಾಗೆ ಎಚ್ಚರಿಕೆ ವಹಿಸಿದ್ದಾರೆ.

ಕತ್ರಿನಾ ಪತಿ ವಿಕ್ಕಿ ಕೌಶಲ್ ಬಂದಿರಲಿಲ್ಲ. ಉಳಿದಂತೆ ಅವರ ಕುಟುಂಬಸ್ಥರೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದಾರೆ. ವಿದ್ಯುತ್ ದೀಪಗಳಿಲ್ಲದೇ ಕತ್ತಲಲ್ಲೇ ನಡೆಯುವ ಕೋಲದಲ್ಲಿ ಕತ್ರಿನಾ ಯಾರಿಗೂ ಕಾಣದಂತೆ ನಿಂತು ವೀಕ್ಷಣೆ ಮಾಡಿದ್ದಾರೆ. ಎರಡು ತಿಂಗಳ ಹಿಂದೆಯೇ ಕತ್ರಿನಾ ಕೈಫ್ ಕುಟುಂಬ ಕೋಲಕ್ಕೆ ಹೆಸರು ನೀಡಿದ್ದರು. ಆದರೆ ಯಾರಿಗೂ ಹೇಳದಂತೆ ರಹಸ್ಯವಾಗಿಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಯಾರಿಗೂ ಗೊತ್ತಾಗಿರಲಿಲ್ಲ. ಕತ್ರಿನಾ ಮತ್ತು ಕುಟುಂಬ ಹೊರಗೆ ನಿಂತೇ ಕೋಲ ವೀಕ್ಷಿಸಿದ್ದು ಬಳಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ.

ಕೇವಲ ಕತ್ರಿನಾ ಕೈಫ್ ಮಾತ್ರವಲ್ಲ, ಕ್ರಿಕೆಟಿಗ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಹಾಗೂ ಸುನಿಲ್ ಶೆಟ್ಟಿ ಮಕ್ಕಳಾದ ಅಹಾನ್ ಶೆಟ್ಟಿ,  ಆದ್ಯಾ ಶೆಟ್ಟಿ ಕೂಡಾ ಕೋಲದಲ್ಲಿ ಭಾಗಿಯಾಗಿದ್ದಾರೆ. ಸಂಜೆ 6 ಗಂಟೆ ವೇಳೆಗೆ ಸೆಲೆಬ್ರಿಟಿಗಳ ಕುಟುಂಬ ಕೋಲದಲ್ಲಿ ಭಾಗಿಯಾಗಲು ಬಂದಿದ್ದಾರೆ.

ಇದಕ್ಕೆ ಮೊದಲು ಕೆಎಲ್ ರಾಹುಲ್ ಪತ್ನಿ ಅಥಿಯಾ ಹಾಗೂ ಅಹಾನ್ ಶೆಟ್ಟಿ ಜೊತೆಗೆ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸುನಿಲ್ ಶೆಟ್ಟಿ ಮೂಲತಃ ಇದೇ ಊರಿನವರಾಗಿದ್ದು, ಇದಕ್ಕೆ ಮೊದಲು ಅಥಿಯಾ ಇಲ್ಲಿಗೆ ಬಂದು ಹೋಗಿದ್ದರು. ಇದೀಗ ಪತಿಯ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

ಮುಂದಿನ ಸುದ್ದಿ
Show comments