Select Your Language

Notifications

webdunia
webdunia
webdunia
webdunia

ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ: ಇಂದು ಅಂತ್ಯಕ್ರಿಯೆ

ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ: ಇಂದು ಅಂತ್ಯಕ್ರಿಯೆ
ಕೋಲ್ಕೊತ್ತಾ , ಗುರುವಾರ, 2 ಜೂನ್ 2022 (09:40 IST)
ಕೋಲ್ಕೊತ್ತಾ: ಮೊನ್ನೆಯಷ್ಟೇ ಅಕಾಲಿಕವಾಗಿ ನಿಧನರಾಗಿದ್ದ ಖ್ಯಾತ ಗಾಯಕ ಕೆಕೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳು ಬಹಿರಂಗವಾಗಿದೆ. ಇಂದು ಅಗಲಿದ ಗಾಯಕನ ಅಂತ್ಯ ಸಂಸ್ಕಾರ ನೆರವೇರಲಿದೆ.

ಕೆಕೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ ತೀವ್ರ ಹೃದಯಾಘಾತದಿಂದಾಗಿ ಸಂಭವಿಸಿದ ಸಾವಾಗಿದೆ. ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಕೆ ಮುಖ ಮತ್ತು ತಲೆಯ ಭಾಗದಲ್ಲಿ ಗಾಯಗಳಾಗಿದ್ದರಿಂದ ಪೊಲೀಸರು ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನು, ನಿನ್ನೆ ಪಶ್ಚಿಮ ಬಂಗಾಲ ಸರ್ಕಾರದ ವತಿಯಿಂದ ಕೆಕೆಗೆ ಗೌರವ ವಿದಾಯ ಸಲ್ಲಿಸಲಾಗಿದೆ. ಇಂದು ಅವರ ಅಂತ್ಯಕ್ರಿಯೆ ಮುಂಬೈನ ವರ್ಸೋವಾ ಚಿತಾಗಾರದಲ್ಲಿ ನೆರವೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನ ಈ ನಟನಿಗೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದ್ಯಂತೆ!