Saif Ali Khan: ಸೈಫ್ ಅಲಿ ಖಾನ್ ಗೆ ದಾಳಿಯಾದಾಗ ಪಾರ್ಟಿ ಮಾಡ್ತಿದ್ದ ಕರೀನಾ ಕಪೂರ್

Krishnaveni K
ಗುರುವಾರ, 16 ಜನವರಿ 2025 (12:44 IST)
Photo Credit: X
ಮುಂಬೈ: ನಟ ಸೈಫ್ ಅಲಿ ಖಾನ್ ಮೇಲೆ ನಿನ್ನೆ ತಡರಾತ್ರಿ ನಡೆದ ದಾಳಿಯ ವೇಳೆ ಪತ್ನಿ, ನಟಿ ಕರೀನಾ ಕಪೂರ್ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೈಫ್ ಅಲಿ ಖಾನ್ ಮುಂಬೈ ನಿವಾಸದಲ್ಲಿ ನಿನ್ನೆ ತಡರಾತ್ರಿ ನುಗ್ಗಿದ್ದ ಕಳ್ಳರು ಮೊದಲು ಮನೆಕೆಲಸದವರ ಮೇಲೆ ದಾಳಿಗೆ ಯತ್ನಿಸಿದ್ದರು. ಈ ವೇಳೆ ಅವರನ್ನು ರಕ್ಷಿಸಲು ಸೈಫ್ ಧಾವಿಸಿದ್ದರು. ಆಗ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಸೈಫ್ ಅಲಿ ಖಾನ್ ಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.  ಈ ದಾಳಿಯ ಸಂದರ್ಭದಲ್ಲಿ ಕರೀನಾ ಎಲ್ಲಿದ್ದರು ಎಂಬುದು ಈಗ ಬಯಲಾಗಿದೆ.

ಈ ದಿನ ರಾತ್ರಿ ಕರೀನಾ, ತಮ್ಮ ಕುಟುಂಬದವರೇ ಆದ ನಟಿ ಸೋನಂ ಕಪೂರ್ ಮತ್ತಿತರರ ಜೊತೆ ಪಾರ್ಟಿ ಮಾಡಲು ತೆರಳಿದ್ದರು. ಈ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಘಟನೆ ವೇಳೆ ಕರೀನಾ ಮನೆಯಲ್ಲಿರಲಿಲ್ಲ. ಹೀಗಾಗಿ ಕರೀನಾ ಮತ್ತು ಮಕ್ಕಳು ದಾಳಿಯಿಂದ ಬಚಾವ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments