Webdunia - Bharat's app for daily news and videos

Install App

ರಾಕಿಂಗ್ ಸ್ಟಾರ್ ಯಶ್ ಗೆ ಸಹೋದರಿಯಾಗಲಿದ್ದಾರೆ ಕರೀನಾ ಕಪೂರ್

Krishnaveni K
ಶುಕ್ರವಾರ, 29 ಮಾರ್ಚ್ 2024 (10:52 IST)
ಮುಂಬೈ: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಿತ್ತು.

ಅದೀಗ ನಿಜವಾಗುವ ಲಕ್ಷಣವಿದೆ. ಕರೀನಾ ಜೊತೆ ಚಿತ್ರತಂಡ ಈಗಾಗಲೇ ಮಾತುಕತೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಕರೀನಾ ಕೂಡಾ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದನ್ನೂ ಚಿತ್ರತಂಡ ಇನ್ನೂ ಅಧಿಕೃತಗೊಳಿಸಿಲ್ಲ.

ಏತನ್ಮಧ್ಯೆ ಸಿನಿಮಾದಲ್ಲಿ ಕರೀನಾ ನಾಯಕ ಯಶ್ ಗೆ ಸಹೋದರಿಯಾಗಿ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯಾಗಿದೆ. ಕರೀನಾ ನಟಿಸಲಿದ್ದಾರೆ ಎಂಬ ಸುದ್ದಿ ತಿಳಿದು ಅಭಿಮಾನಿಗಳು ಯಶ್ ಗೆ ಯಾವುದೇ ರೀತಿಯಲ್ಲೂ ಕರೀನಾ ಜೋಡಿಯಾಗಲ್ಲ ಎಂದಿದ್ದರು. ಆದರೆ ಅವರು ಖಂಡಿತಾ ಜೋಡಿಯಾಗಿ ನಟಿಸುತ್ತಿಲ್ಲ.

ಬದಲಾಗಿ ಕರೀನಾ ಸಹೋದರಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕುವ ಸಾಧ‍್ಯತೆಯಿದೆ. ಸದ್ಯಕ್ಕೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಗೋವಾದಲ್ಲಿ ಟಾಕ್ಸಿಕ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments