ಬಾಲಿವುಡ್ ನಟಿ ಕರೀನಾ ಕಪೂರ್ ತಾಯಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇಚೆಗಷ್ಟೇ ನಟ ಸೈಫ್ ಆಲಿಖಾನ್ ನಾನು ಹಾಗೂ ಕರೀನಾ ಕಪೂರ್ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತಾ ಬಹಿರಂಗಗೊಳಿಸಿದ್ದರು. ಕರೀನಾ ತಾಯಿಯಾಗುತ್ತಿದ್ದಾರೆ ಅಂತ ಸೈಫ್ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ನಟಿ ಕರೀನಾ ಕಪೂರ್ ಕೂಡ ಮೌನ ಮುರಿದಿದ್ದಾರೆ. ತಾಯಿಯಾಗುತ್ತಿರುವುದರ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಮಾಧ್ಯಮದವರ ಮೇಲೆ ಕರೀನಾ ಫುಲ್ ಗರಂ ಆಗಿದ್ದಾರೆ.
ಕರೀನಾ ತಾನು ತಾಯಿಯಾಗುತ್ತಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.ಅಲ್ಲದೇ ಬೆಬೋ ಮಾಧ್ಯಮದವರು ಮೇಲೆ ಫುಲ್ ಗರಂ ಕೂಡ ಆಗಿದ್ದಾರೆ. ಅದಕ್ಕೆ ಕಾರಣ ಅವರು ತಾಯಿಯಾಗುತ್ತಿರೋ ಸುದ್ದಿ ಬಗ್ಗೆ ಹುಟ್ಟಿಕೊಂಡ ಬೇರೆ ಬೇರೆ ಸುದ್ದಿಗಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ತಾಯಿಯಾಗುತ್ತಿರೋದು ನಿಜ. ಅದರಲ್ಲೇನಿದೆ ವಿಶೇಷ. ಭೂಮಿಯಲ್ಲಿ ಹೆಣ್ಣು ತಾಯಿಯಾಗೋದ ಸಾಮಾನ್ಯ ವಿಚಾರ. ಅದನ್ನು ಸುದ್ದಿ ಮಾಡೋದರಲ್ಲೇನಿದೆ ವಿಶೇಷ ಎಂದು ಹೇಳಿದ್ದಾರೆ.
ಮಾಧ್ಯಮದವರು ನನ್ನನ್ನು ಭಿನ್ನವಾಗಿ ನೋಡೋದನ್ನು ದಯವಿಟ್ಟು ನಿಲ್ಲಿಸಿ ಬಿಡಿ ಅಂತಾ ಕರೀನಾ ಹೇಳಿದ್ದಾರೆ.ಇದನ್ನೇ ಸುದ್ದಿ ಮಾಡಬೇಡಿ. ಇದೇನು ರಾಷ್ಟ್ರಮಟ್ಟದ ಸುದ್ದಿಯಲ್ಲ. ನಾವೀಗ 2016ನೇ ಇಸವಿಯಲ್ಲಿದ್ದೇವೆ. 1800 ರಲ್ಲಿ ಇಲ್ಲ ಅಂತಾ ಬೆಬೋ ಹೇಳಿದ್ದಾರೆ.
ಇವತ್ತು ಜನ ತುಂಬಾನೇ ಮುಂದಿದ್ದಾರೆ.ಅವರ ಯೋಚನಾ ಶೈಲಿಗಳು ಬದಲಾಗಿವೆ. ಅದಕ್ಕೆ ನಾವು ಕೂಡ ಬದಲಾಗಬೇಕು.ಅದನ್ನು ಬಿಟ್ಟು ಈ ರೀತಿ ಸುಖಾಸುಮ್ಮನೆ ಸುದ್ದಿ ಮಾಡೋದು ಸರಿಯಲ್ಲ ಅಂತಾ ಕರೀನಾ ಹೇಳಿದ್ದಾರೆ.ಅಂದ್ಹಾಗೆ ಇದೇ ವರ್ಷ ಡಿಸೆಂಬರ್ ನಲ್ಲಿ ಕರೀನಾ ಕಪೂರ್ ಮಗುವಿಗೆ ಜನ್ಮ ನೀಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ