ತಮಿಳು ಚಿತ್ರದಲ್ಲಿ ಕನ್ನಡದ ಕಿಶೋರ್ ನಟಿಸಲಿದ್ದಾರೆ..ಈಗಾಗ್ಲೇ ನಟ ಕಿಶೋರ್ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಗೌತಮ್ ರಾಜ್ ನಿರ್ದೇಶನದ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಕಿಶೋರ್ ಈ ಚಿತ್ರದಲ್ಲಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಳ್ಳಿಯೊಂದರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಮೇಸ್ಟ್ರರಾಗಿ ಕಿಶೋರ್ ಅಭಿನಯಿಸುತ್ತಿದ್ದಾರೆ. ಮಕ್ಕಳಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಲಿದ್ದಾರೆ.
ಅಲ್ಲದೇ ಎಲ್ಲಾ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದು ಟೀಚರ್ ಜವಾಬ್ದಾರಿ.. ಹಾಗಾಗಿ ಕಿಶೋರ್ ತಮ್ಮ ಪಾತ್ರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರಂತೆ. ಇನ್ನೂ ಈ ಚಿತ್ರದ ಶೂಟಿಂಗ್ ಜುಲೈರಂದು ಆರಂಭವಾಗಲಿದೆ.