ಸಿನಿಮಾರಂಗದಲ್ಲಿ ಒಬ್ಬ ನಟಿಯನ್ನು ನೋಡಿದ್ರೆ ಇನ್ನೊಬ್ಬರಿಗೆ ಆಗಲ್ಲ. ಅವರಿದ್ದ ಕಾರ್ಯಕ್ರಮಕ್ಕೆ ಇವರು ಹೋಗಲ್ಲ ಇವರಿದ್ದ ಕಡೆ ಅವರು ಹೋಗಲ್ಲ. ಈ ರೀತಿಯ ಮಾತುಗಳು ಕೇಳಿ ಬರೋದು ಮಾಮೂಲಿ.ಆದ್ರೆ ಇದಕ್ಕೆ ವಿರುದ್ಧವಾದ ಅನೇಕ ಸನ್ನಿವೇಶಗಳನ್ನು ಕಬೂಡ ನಾವು ಅನೇಕ ಬಾರಿ ನೋಡಿದ್ದೇವೆ.ಅದೆಷ್ಟೋ ಬಾರಿ ಕೆಲ ನಟಿಯರು ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ಇದೀಗ ವಿದ್ಯಾ ಬಾಲನ್ ಕೂಡ ಹಾಗೇ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಹಾಗೂ ಕಂಗನಾ ರನೋಟ್ ಅವರ ನಡುವೆ ಉಂಟಾಗುತ್ತಿರುವ ಜಗಳ ಎಲ್ಲರಿಗೂ ಗೊತ್ತೇ ಇದೆ. ಈ ಜಗಳ ಬಾಲಿವುಡ್ ನ ಗಲ್ಲಿ ಗಲ್ಲಿಗಳಲ್ಲಿ ಸುದ್ದಿಯಾಗಿದೆ. ಹೀಗಿರುವಾಗಲೇ ನಟಿ ವಿದ್ಯಾ ಬಾಲನ್ ಕಂಗನಾ ಅವರನ್ನು ಹೊಗಳಿದ್ದಾರೆ.
ಕಂಗನಾ ತನ್ನ ವಿರುದ್ಧ ನಾನಾ ರೀತಿಯ ಮಾತುಗಳು ಕೇಳಿ ಬಂದ್ರೂ ಅದು ಯಾವುದನ್ನು ಕಿವಿ ಹಾಕಿಕೊಳ್ಳದೇ ತನ್ನದೇ ಆದ ರೀತಿಯಲ್ಲಿ ಅದರ ವಿರುದ್ಧ ಹೋರಾಡಿದ್ದಾಳೆ.ಅವಳ ಆ ಧೈರ್ಯ, ಅವಳಲ್ಲಿರುವ ಹೋರಾಟ ಮನೋಭಾವ ಎಲ್ಲರಿಗೂ ಸ್ಫೂರ್ತಿ ಅಂತಾ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾ ನಾವು ಅಂದ್ರೆ ಮಹಿಳೆಯರು ಅದೆಷ್ಟೋ ಸಂದರ್ಭಗಳಲ್ಲಿ ಪುರುಷರಿಗೆ ವಿರುದ್ಧವಾಗಿ ನಿಲ್ಲಬೇಕಾಗುತ್ತೆ. ಇಂತಹ ಸಂದರ್ಭಗಳಲ್ಲಿ ಅವರ ಮುಂದೆ ನಿಲ್ಲೋದು ನಿಜಕ್ಕೂ ಅದು ಸವಾಲಿನ ಕೆಲಸ. ಸಾಕಷ್ಟು ಧೈರ್ಯ ಬೇಕು ಕಂಗನಾ ಆ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ ಅಂದಿದ್ದಾರೆ.