ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಬಹು ವರ್ಷದ ಪ್ರೇಯಸಿ ಅಂಕಿತಾ ಲೋಖಂಡೆ ಅವರಿಂದ ದೂರವಾಗಿದ್ದೇ ತಡ ಅವರಿಬ್ಬರು ದೂರವಾದ್ದರ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬಂದಿದ್ದವು.ಅವರಿಬ್ಬರು ಈ ಕಾರಣಕ್ಕೆ ದೂರವಾದ್ರು ಆ ಕಾರಣಕ್ಕೆ ದೂರವಾದ್ರು ಅಂತಾ ಹೇಳಲಾಗುತ್ತಿತ್ತು.
ಆದ್ರೀಗ ಸುಶಾಂತ್ ಸಿಂಗ್ ಜೊತೆ ಇನ್ನೊಬ್ಬ ನಟಿಯ ಹೆಸರು ಥಳುಕು ಹಾಕಿಕೊಂಡಿದೆ.ಸುಶಾಂತ್ ಸಿಂಗ್ ರಜಪೂತ್ ಹಾಗೂ ಕೃತಿ ಸನೋನ್ ಅವರು ರಾಬ್ತಾ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಆರಂಭವಾದಗಿನಿಂದಲೇ ಇವರಿಬ್ಬರು ಪರಸ್ಪರ ಕ್ಲೋಸ್ ಆಗಿರುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಆದ್ರೀಗ ಸುಶಾಂತ್ ಅವರು ಅಂಕಿತಾ ಅವರಿಂದ ದೂರವಾದ ಬಳಿಕ ಕೃತಿ ಅವರೊಂದಿಗೆ ತುಂಬಾನೇ ಕ್ಲೋಸ್ ಆಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರು ಜೊತೆಯಾಗಿರುವ ಕೆಲವು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಆಗಿವೆ.
ಇನ್ನು ಅಂಕಿತಾ ಲೋಖಂಡೆ ಅವರಿಂದ ಸುಶಾಂತ್ ದೂರವಾಗುವ ವೇಳೆ ಅವರಿಬ್ಬರು ದೂರವಾಗಿದ್ದು ಯಾಕೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು.ಆಗ ಸುಶಾಂತ್ ಅವರ ಹೆಸರಿನ ಜೊತೆ ಪರಿಣಿತಿ ಛೋಪ್ರಾ ಅವರ ಹೆಸರು ಕೇಳಿ ಬಂದಿತ್ತು.ಆದ್ರೀಗ ಸುಶಾಂತ್ ಅವರು ಕೃತಿ ಅವರೊಂದಿಗೆ ಓಡಾಡುತ್ತಿರೋ ವಿಚಾರ ಬಾಲಿವುಡ್ ಮಂದಿಯ ಆಹಾರವಾಗಿದೆ.