Select Your Language

Notifications

webdunia
webdunia
webdunia
webdunia

ಕಂಗನಾ ಬಗ್ಗೆ ಪ್ರಶಂಸೆ ನೀಡಿದಕ್ಕೆ ಮುನಿಸಿಕೊಂಡಿದ್ದಾರಾ ವಿದ್ಯಾಬಾಲನ್ ಪತಿ?

Vidya Balan
ಮುಂಬೈ , ಸೋಮವಾರ, 9 ಮೇ 2016 (12:09 IST)
ಮೊನ್ನೆ ಕಂಗನಾ ಹಾಗೂ ಹೃತಿಕ್ ಮಧ್ಯೆ ನಡೆದಿರುವ ವಾರ್‌ಗೆ ಸಂಬಂಧಪಟ್ಟಂಚೆ ನಟಿ ವಿದ್ಯಾಬಾಲನ್ ಬೆಂಬಲ ನೀಡಿದ್ದರು ಕಂಗನಾ ಧೈರ್ಯವನ್ನು ಮೆಚ್ಚುತ್ತೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಇದರ  ಬೆನ್ನಲ್ಲೇ ವಿದ್ಯಾ ಬಾಲನ್ ಪತಿ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.


ಕೆಲ ಮೂಲಗಳ ಪ್ರಕಾರ, ಕಂಗನಾ ಬೆಂಬಲ ನೀಡಿರುವುದಕ್ಕಾಗಿ ವಿದ್ಯಾ ಬಾಲನ್ ಪತಿಗೆ ಇಷ್ಟವಿಲ್ವಂತೆ ಎಂದು ಹೇಳಲಾಗ್ತಿದೆ. ವಿದ್ಯಾ ಬಾಲನ್ ಪತಿಗೆ ಇದ್ರಿಂದ ಹ್ಯಾಪಿ ಇಲ್ವಂತೆ.
 
Te3n ಚಿತ್ರದ ಟ್ರೇಲರ್ ಲಾಂಚ್ ವೇಳೆ ಹೃತಿಕ್ ಹಾಗೂ ಕಂಗನಾ ಮಧ್ಯೆ ನಡೆದಿರುವ ವಾರ್ ಬಗ್ಗೆ ವಿದ್ಯಾ ಬಾಲನ್‌ ಪ್ರತಿಕ್ರಿಯೆ ನೀಡಿದ್ದರು.. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ವಿದ್ಯಾ, ಕಂಗನಾ ಧೈರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು..

ಇನ್ನೂ ಸಿದ್ದಾರ್ಥ ಎಲ್ಲಾ ನಟರ ಜತೆ ಕೆಲಸಮಾಡಿದ್ದಾರೆ. ಈ ವಿಷ್ಯದ ಬಗ್ಗೆ ಕಮೆಂಟ್ ಕೊಡುವುದು ಅವರಿಗೆ ಇಷ್ಟವಿಲ್ಲ. ಹಾಗಾಗಿ ಅವರು ತಟಸ್ಥರಾಗಿದ್ದಾರೆ. ಆದರೆ ಪತ್ನಿ ವಿದ್ಯಾ ಕಂಗನಾ ಪರವಾಗಿ ಮಾತಾಡಿರೋದು ಅವರಿಗೆ ಇಷ್ಟವಾಗಿಲ್ಲ ಎಂದು ಹೇಳಲಾಗ್ತಿದೆ. 

ವಿದ್ಯಾ ಬಾಲನ್ ಅಭಿನಯದ ಕಹಾನಿ-2 ಚಿತ್ರಕ್ಕೆ ಡೇಟ್ ಫಿಕ್ಸ್ ಆಗಿದೆ. 25 ನವೆಂಬರ್ 2016ಕ್ಕೆ ಚಿತ್ರ ಬಿಡುಗಡೆಯಾಗಲಿದೆ.  ಫೈನಲ್ ಆಗಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ವಿದ್ಯಾ ಬಾಲನ್.
 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ವಸಂತೋತ್ಸವಂ ಫೆಸ್ಟಿವಲ್‌ನಲ್ಲಿ ಅಮಿತಾಬ್ ಬಚ್ಚನ್