Webdunia - Bharat's app for daily news and videos

Install App

ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧರಾಗಿ ಮಿಂಚಿದ 'ಕಲಂಕ್' ನಟ ನಟಿಯರು...

Webdunia
ಬುಧವಾರ, 13 ಮಾರ್ಚ್ 2019 (15:20 IST)
ಅಭಿಷೇಕ್ ವರ್ಮನ್ ಅವರ ಕಲಂಕ್ ಚಿತ್ರದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿದ ನಂತರ ನಿರ್ಮಾಪಕರು ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಅಭಿಮಾನಿಗಳು ತುಂಬಾ ಕಾಯುತ್ತಿರುವಾಗ ಚಿತ್ರದ ನಟರು ತಮ್ಮಷ್ಟಕ್ಕೆ ಇರಲು ಸಾಧ್ಯವಿಲ್ಲ. ಚಿತ್ರದ ಸಂಪೂರ್ಣ ಪಾತ್ರಧಾರಿಗಳು ಮತ್ತು ಸಿಬ್ಬಂದಿ ವರ್ಗದೊಂದಿಗೆ ಕರಣ್ ಜೋಹರ್ ಕಲಂಕ್ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಟೀಸರ್ ಬಿಡುಗಡೆಗೂ ಮುನ್ನ ಆಲಿಯಾ, ವರುಣ್, ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯಾ ಕೆಲವು ನಿಮಿಷಗಳ ತಮಾಷೆಯ ಸಮಯವನ್ನು ಕಳೆದಿದ್ದು, ಅದರ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಆಲಿಯಾ ಮತ್ತು ವರುಣ್ ಧವನ್ ಬಿಳಿಯ ಬಣ್ಣದ ಡ್ರೆಸ್‌ನಲ್ಲಿ ಕಂಡುಬಂದರೆ, ಆದಿತ್ಯಾ ಮತ್ತು ಸೋನಾಕ್ಷಿ ಕೆಂಪು ಬಣ್ಣದ ಡ್ರೆಸ್‌ನಲ್ಲಿದ್ದರು.
 
ಈ ಚಿತ್ರವನ್ನು ಅಭಿಷೇಕ್ ವರ್ಮನ್ ನಿರ್ದೇಶಿಸುತ್ತಿದ್ದು ಕರಣ್ ಜೋಹರ್ ಮತ್ತು ಸಾಜಿದ್ ನದಿಯಾದ್ವಾಲಾ ನಿರ್ಮಾಪಕರಾಗಿದ್ದಾರೆ. ಈ ಚಿತ್ರವನ್ನು ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಲಿಯಾ ಭಟ್, ವರುಣ್ ಧವನ್, ಆದಿತ್ಯಾ ರಾಯ್ ಕಪೂರ್, ಸೋನಾಕ್ಷಿ ಸಿನ್ಹಾ, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಕಾಣಿಸಿಕೊಳ್ಳಲಿದ್ದು ಅತಿಥಿ ಪಾತ್ರದಲ್ಲಿ ಕಿಯಾರಾ ಅಡ್ವಾನಿ ಮತ್ತು ಕೃತಿ ಸನನ್ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿಮಾನಿಗಳಿಗಾಗಿ ತಾವೇ ಸಿಎಂ ಭೇಟಿಗೆ ಮುಂದಾದ ಭಾರತಿ ವಿಷ್ಣುವರ್ಧನ್

ಪವಿತ್ರಾ ಗೌಡಗೆ ಬಿಗ್ ಶಾಕ್ ನೀಡಿದ ಕೋರ್ಟ್, ಬೇಲ್ ಅರ್ಜಿ ವಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ದರ್ಶನ್ ಗೆ ಬೆಂಗಳೂರು ಜೈಲಿನಿಂದ ಗೇಟ್ ಪಾಸ್ ಸಿಗುತ್ತಾ, ಕೋರ್ಟ್ ತೀರ್ಮಾನ ಏನಿರುತ್ತೋ

Annaiah serial: ತೆರೆ ಮೇಲೆ ನಡೀತು ಶಿವು, ಪಾರು ಫಸ್ಟ್ ನೈಟ್, ಅಯ್ಯೋ ಶಿವನೇ ಎಂದ ವೀಕ್ಷಕರು

ಮುಂದಿನ ಸುದ್ದಿ
Show comments