ಮುಂಬೈ: ಬಾಲಿವುಡ್ ನಟಿ ಕಾಜೋಲ್ ವಿಭಿನ್ನ ಪಾತ್ರಗಳಿಗೇ ಹೆಸರುವಾಸಿ. ಮದುವೆಯಾಗಿ ಎರಡು ಮಕ್ಕಳ ತಾಯಿಯಾದರೂ ಆಕೆಯ ಆರಾಧಕರಿಗೇನೂ ಕಡಿಮೆಯಿಲ್ಲ. ಮುಂದಿನ ವರ್ಷ ಸೆಟ್ಟೇರಲಿರುವ ಹೊಸ ಚಿತ್ರದಲ್ಲಿ ಆಕೆ ಅಮ್ಮನ ಪಾತ್ರ ನಿರ್ವಹಿಸಲಿದ್ದಾರಂತೆ.
ಮುಂದಿನ ಸಿನಿಮಾದಲ್ಲಿ ಸಿಂಗಲ್ ಮದರ್ ಪಾತ್ರ ನಿರ್ವಹಿಸಲಿದ್ದು, ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಕಾಜೋಲ್ ಹೇಳಿದ್ದಾರೆ. ಆನಂದ್ ಗಾಂಧಿ ನಿರ್ದೇಶನದ ಚಿತ್ರದಲ್ಲಿ ಕಾಜೋಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಇನ್ನೂ ಪೂರ್ತಿಯಾಗಿಲ್ಲ. ಇದೊಂದು ಉತ್ತಮ ಕತೆಯಾಗಿದ್ದಕ್ಕೆ ಒಪ್ಪಿಕೊಂಡೆ ಎಂದು ಕಾಜೋಲ್ ಹೇಳಿದ್ದಾರೆ. ಇದಕ್ಕಿಂತ ಮೊದಲು ಕಾಜೋಲ್ ಕರಣ್ ಜೋಹರ್ ಅವರ ದಿಲ್ ವಾಲೆ ಚಿತ್ರದಲ್ಲಿ ಶಾರುಖ್ ಖಾನ್ ಜತೆ ಅಭಿನಯಿಸಿದ್ದರು. ಆದರೆ ಈ ಚಿತ್ರದ ನಂತರ ಇವರಿಬ್ಬರ ಸಂಬಂಧ ಹಳಸಿದೆ ಎಂದು ಸ್ವತಃ ಕಾಜೋಲ್ ಪತಿ ಅಜಯ್ ದೇವಗನ್ ಇತ್ತೀಚೆಗೆ ಹೇಳಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ