ಕಬಾಲಿ ಚಿತ್ರದಲ್ಲಿ ರಜನಿ 'ಫಾದರ್ ಆಫ್ ಬಾಹುಬಲಿ' ಎಂದ ರಾಮಗೋಪಾಲ ವರ್ಮಾ
ಮುಂಬೈ , ಸೋಮವಾರ, 2 ಮೇ 2016 (12:19 IST)
'ಕಬಾಲಿ' ಚಿತ್ರ ಎಲ್ಲೆಡೆ ಸದ್ದು ಮಾಡ್ತಿದೆ. ಕಬಾಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವುದರಿಂದ ಖ್ಯಾತ ನಿರ್ಮಾಪಕ ರಾಮಗೋಪಾಲ ವರ್ಮಾ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ರಾಮ್ ಗೋಪಾಲ ವರ್ಮಾ ಬಗ್ಗೆ ಆರ್‌ಜಿವಿ ಟ್ವಿಟ್ ಮಾಡಿದ್ದಾರೆ... ಚಿತ್ರದ ಟೀಸರ್ ನೋಡಿರೋ ರಾಮ್‌ಗೋಪಾಲ ವರ್ಮಾ, ರಜನಿಕಾಂತ್‌ರನ್ನು 'ಫಾದರ್ ಆಫ್ ಬಾಹುಬಲಿ' ಎಂದು ಹೊಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್‌ರ ಬಗ್ಗೆ ಪ್ರಶಂಸೆ ಮಾಡಿದ್ದಾರೆ.
ಇಷ್ಟೇ ಅಲ್ದೇ ಕಬಾಲಿ ಚಿತ್ರದ ಟೀಸರ್ ಇಂಟರ್‌ನೆಟ್ , ಟ್ವಿಟರ್, ಫೇಸ್‌ಬುಕ್, ಯೂಟೂಬ್ ಗಳಲ್ಲಿ ಭಾರಿ ಸೌಂಡು ಮಾಡ್ತಿದೆ. ಅದರಂತೆ ಟ್ವಿಟರ್, ಫೇಸ್‌ಬುಕ್ ಗಳಲ್ಲೂ ಕಬಾಲಿ ಚಿತ್ರದ ಟೀಸರ್ ಕ್ರೇಜ್ ಮೂಡಿಸುತ್ತಿದೆ. ಅದಲ್ಲದೇ ಚಿತ್ರರಂಗದ ಹಲವರು ಟೀಸರ್ ನಿಂದ ಕ್ರೇಜ್ ಆಗಿದ್ದಾರೆ.
ರಜನಿಕಾಂತ್ ಸ್ಟೈಲಿಶ್ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ರಿವಾಲ್ವರ್ ಕೈಯಲ್ಲಿ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ ರಜನಿಕಾಂತ್.. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಮುಂದಿನ ಸುದ್ದಿ