ಸದ್ದಿಲ್ಲದೇ ಸ್ಯಾಂಡಲ್ ವುಡ್ ನಿಂದ ಮಾಯವಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಅವರು ಮೊನ್ನೆ ಮೊನ್ನೆ ತಾನೇ ವಾಪಸ್ಸಾಗಿದ್ದರು. ವಾಪಸ್ ಆದ ಶರ್ಮಿಳಾ ಮಾಂಡ್ರೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋದ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಶರ್ಮಿಳಾ ಸದ್ದಿಲ್ಲದೇ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಅಂದ್ಹಾಗೆ ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿರುವ ಸಿನಿಮಾ ಯಾವುದಪ್ಪಾ ಅಂತಿದ್ದೀರಾ.. ಶರ್ಮಿಳಾ ಮಾಂಡ್ರೆ ಅವರು ಸದ್ಯ ಅಭಿನಯಿಸುತ್ತಿರುವ ಕನ್ನಡದ ಮಿಸ್ಟಿರಿ ಕಥೆಯಾಧಾರಿತ ಸಿನಿಮಾದ್ಲಲಿ, ಕೆ.ಎಂ.ಚೈತನ್ಯ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾವಿದು..
ಕಳೆದ ಎರಡು ವಾರಗಳಿಂದ ಸಿನಿಮಾ ತಂಡ ಲಂಡನ್ ನಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದೆ. ಇದೀಗ ಈ ಸಿನಿಮಾದ ಶೂಟಿಂಗ್ ನಲ್ಲಿ ಶರ್ಮಿಳಾ ಮಾಂಡ್ರೆ ಅವರ ಭಾಗಿಯಾಗಿದ್ದಾರೆ.ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಗೂ ಅಚ್ಯುತ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಸಿನಿಮಾದ ಇತರೆ ತಾರೆಯರ ಬಗ್ಗೆ ಇನ್ನು ಮಾಹಿತಿ ಹೊರ ಬಿದ್ದಿಲ್ಲ.\ಬುಧವಾರದಿಂದ ಸಿನಿಮಾದ ಶೂಟಿಂಗ್ ನಲ್ಲಿ ಶರ್ಮಿಳಾ ಮಾಂಡ್ರೆ ಅವರು ಭಾಗಿಯಾಗಿದ್ದಾರೆ. ಇನ್ನು ಇದುವೆರೆಗೂ ಸಿನಿಮಾದ ಹೆಸರನ್ನು ಮಾತ್ರ ಸಿನಿಮಾ ತಂಡ ಇದುವೆರೆಗೂ ರಿವೀಲ್ ಮಾಡಿಲ್ಲ.
ಸಿನಿಮಾ ತಂಡ ಇದೇ ತಿಂಗಳ 23 ರಂದು ಬೆಂಗಳೂರಿಗೆ ವಾಪಸ್ ಬರಲಿದೆ.ಆ ಬಳಿಕ ಸಿನಿಮಾದ ಹೆಸರನ್ನು ಬಹಿರಂಗ ಪಡಿಸುತ್ತಾರಂತೆ ಸಿನಿಮಾತಂಡದವರು.