Publish Date: Sun, 23 Oct 2016 (10:28 IST)
Updated Date: Sun, 23 Oct 2016 (11:26 IST)
ಮುಂಬೈ: ದೇಶದೆಲ್ಲೆಡೆ ಪಾಕಿಸ್ತಾನ ನಟರು ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಕುರಿತು ಚರ್ಚೆಯಾಗುತ್ತಿದ್ದರೆ, ಬಾಲಿವುಡ್ ನಟ ಜಾನ್ ಅಬ್ರಹಾಂ ನನಗೆ ದೇಶ ಮೊದಲು ಎಂದಿದ್ದಾರೆ.
ಪಾಕಿಸ್ತಾನದ ನಟರು ಇಲ್ಲಿನ ಸಿನಿಮಾದಲ್ಲಿ ನಟಿಸುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು “ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮತ್ತೆ ನನ್ನಲ್ಲಿ ಇದರ ಅಭಿಪ್ರಾಯ ಕೇಳಬೇಡಿ. ನನಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವುದು ಮುಖ್ಯವಲ್ಲ. ದೇಶವೇ ಮುಖ್ಯ” ಎಂದಿದ್ದಾರೆ.
ತಮ್ಮ ಮುಂಬರುವ “ಫೋರ್ಸ್ 2” ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ಅಂದ ಹಾಗೆ ಫೋರ್ಸ್ ಚಿತ್ರದ ಈ ಹಾಡು ಕೂಡಾ ದೇಶಭಕ್ತಿಯನ್ನು ಪ್ರತಿಬಿಂಬಿಸುತ್ತದಂತೆ. ಇದೊಂದು ಸಾಹಸಮಯ ಸಿನಿಮಾವಾಗಿದ್ದು, ಜಾನ್ ಪೊಲೀಸ್ ಅಧಿಕಾರಿ ಪಾತ್ರ ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ