ಜಯಲಲಿತಾ ಅವರು ಇಷ್ಟುಬೇಗ ನಮ್ಮನ್ನೆಲ್ಲಾ ಬಿಟ್ಟುಹೋಗುತ್ತಾರೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ ಹೇಮಾ ಮಾಲಿನಿ. ಜಯಲಲಿತಾ ಮತ್ತು ನಾನು ಒಂದೇ ಸಮಯಕ್ಕೆ ಸಿನಿಮಾ ರಂಗಕ್ಕೆ ಅಡಿಯಿಟ್ಟಿದ್ದು. ಇಬ್ಬರ ವಯಸ್ಸು ಒಂದೇ ಎಂದು ಆದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಜಯ ಅವರ ಜೊತೆಗೆ ಅಭಿನಯಿಸುವ ಅವಕಾಶನ ನನಗೆ ಮೊದಲ ಸಿನಿಮಾದಲ್ಲೇ ಸಿಕ್ಕಿತ್ತು. ಅವರೊಂದಿಗಿನ ಸ್ನೇಹವನ್ನು ಹೇಮಾ ಮಾಲಿನಿ ನೆನಪಿಸಿಕೊಂಡಿದ್ದು ಹೀಗೆ...ತಮಿಳಿನಲ್ಲಿ ನನಗೆ ಮೊದಲ ಬಾರಿ ವೆನ್ನಿರಾಡೈ ಅನ್ನೋ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಆಗ ನನ್ನ ವಯಸ್ಸು 15ಕ್ಕಿಂತ ಜಾಸ್ತಿ ಇರಲ್ಲ.
ಇನ್ನೂ ಚಿಕ್ಕ ಹುಡುಗಿ ಎಂದು ಪ್ರೇಮ, ಅನುರಾಗ ಇದೆಲ್ಲಾ ಅರ್ಥ ಆಗಲ್ಲ ಎಂದು ನಿರ್ದೇಶಕ ಶ್ರೀಧರ್ ಆ ಚಿತ್ರಕ್ಕೆ ಬೇಡ ಎಂದರಂತೆ. ಆ ಚಿತ್ರದಿಂದ ನನ್ನನು ತೆಗೆದದ್ದು ಯಾಕೆ ಎಂದು ಯೋಚಿಸಿದೆ. ಜಯಲಲಿತಾ ಅವರೊಂದಿಗೆ ನಟಿಸಿದ ಕೆಲ ದಿನಗಳಲ್ಲಿ ಅವರನ್ನು ತುಂಬಾ ಹತ್ತಿರದಿಂದ ಗಮನಿಸಿದೆ. ಆಕೆಯ ಅಂದ, ಆಕರ್ಷಕ ವ್ಯಕ್ತಿತ್ವ ನನ್ನನ್ನು ಸೆಳೆಯಿತು.
ಜಯಲಲಿತಾ ಅವರ ತಾಯಿಯೊಂದಿಗೆ ಶೂಟಿಂಗ್‌ಗೆ ಬರುತ್ತಿದ್ದರು. ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಮೊಟ್ಟಮೊದಲ ಸಲ ಸೆಟ್ಸಲ್ಲಿ ಭೇಟಿಯಾಗಿದ್ದೆ. ನನ್ನ ಮೊದಲ ಚಿತ್ರದ ಮೂಲಕ ಪರಿಚಯವಾದ ಆ ನಟಿ ದೇಶದ ವರ್ಚಸ್ವಿ ನಾಯಕಿಯಾಗಿ ಬದಲಾಗಿದ್ದು, ರಾಜಕೀಯ ನಾಯಕಿ ಅಷ್ಟೇ ಅಲ್ಲದೆ, ಬಡವರ ಹೃದಯದಲ್ಲಿ ನೆಲೆಸಿದ್ದು ನನ್ನನ್ನು ಚಕಿತಗೊಳಿಸಿತ್ತು. ಮಹಿಳೆಯರಿಗೆಲ್ಲಾ ಆಕೆ ಸ್ಫೂರ್ತಿ ಎಂದಿದ್ದಾರೆ ಹೇಮಾ ಮಾಲಿನಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.