ಸಲ್ಮಾನ್ ಖಾನ್‌ಗೆ ತಂದೆಯಾಗಲಿರುವ ಜಾಕಿ ಶ್ರಾಫ್..

Webdunia
ಸೋಮವಾರ, 3 ಸೆಪ್ಟಂಬರ್ 2018 (17:18 IST)
ಸಲ್ಮಾನ್ ಖಾನ್‌ ಮುಖ್ಯ ಪಾತ್ರದಲ್ಲಿರುವ ಭಾರತ್ ಚಿತ್ರ ತನ್ನ ತಂಡಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಡಿದೆ. ಜಾಕಿ ಶ್ರಾಫ್ ಅವರು ಸಲ್ಮಾನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದನ್ನು ಈ ಚಿತ್ರದ ನಿರ್ದೇಶಕರಾದ ಅಲಿ ಅಬ್ಬಾಸ್ ಸ್ವತಃ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ಶಾಶ್ವತ ಬಂಧವನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಭಾರತ್ ತಂಡ ತನ್ನ ಎರಡನೇ ಹಂತದ ಶೂಟಿಂಗ್ ಅನ್ನು ಇತ್ತೀಚೆಗೆ ಮಾಲ್ಟಾದಲ್ಲಿ ಪೂರ್ಣಗೊಳಿಸಿದ್ದು, ಚಿತ್ರದ ಕುರಿತು ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಸೆಟ್‌ಗಳಲ್ಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದೆ. ಮೊದಲನೇ ಹಂತದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದು ಅದರಲ್ಲಿ ಸಲ್ಮಾನ್ ಹಾಗೂ ದಿಶಾ ಪಟಾಣಿ ಅವರಿದ್ದಾರೆ. ವೈಭವಿ ಮರ್ಚೆಂಟ್ ಅವರ ಸಂಯೋಜನೆಯ ಹಾಡನ್ನು ಮೊದಲ ಹಂತದಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ದಿಶಾ ಪಟಾಣಿ ಅವರನ್ನು ಟ್ರಾಪೆಜ್ ಕಲಾವಿದೆಯಾಗಿ ಪ್ರದರ್ಶಿಸಲಾಗಿದ್ದು, ಆ್ಯಕ್ಷನ್ ಸನ್ನಿವೇಶಗಳು ಮತ್ತು ಸಾಹಸಮಯ ಸ್ಟಂಟ್‌ಗಳನ್ನು ಚಿತ್ರೀಕರಿಸಲಾಗಿದೆ. ಇದಕ್ಕಾಗಿ ಚಿತ್ರವು ಸೆಟ್ಟೇರುವ ಕೆಲವು ತಿಂಗಳ ಮೊದಲೇ ಅವರು ತಯಾರಿಯನ್ನು ನಡೆಸಿದ್ದರು ಎಂದು ತಿಳಿದುಬಂದಿದೆ.
 
ಸುಲ್ತಾನ್, ಟೈಗರ್ ಜಿಂದಾ ಹೈ ಚಿತ್ರಗಳ ನಂತರ ಸಲ್ಮಾನ್ ಹಾಗೂ ಅಲಿ ಅಬ್ಬಾಸ್ ಅವರ ನಟ-ನಿರ್ದೇಶಕರ ಯಶಸ್ಸಿನ ಜೋಡಿಯು ಭಾರತ್ ಮೂಲಕ ಹ್ಯಾಟ್ರಿಕ್ ಸಾಧನೆಯ ಹಾದಿಯಲ್ಲಿದೆ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸಲ್ಮಾನ್ ಖಾನ್, ಕತ್ರೀನಾ ಕೈಫ್, ದಿಶಾ ಪಟಾಣಿ, ಸುನಿಲ್ ಗ್ರೋವರ್, ಟಬು ಮತ್ತು ಜಾಕಿ ಶ್ರಾಫ್ ಇರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments