ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಮುಂಬರುವ ಚಿತ್ರ ದಬ್ಬಾಂಗ್ -3 ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಪರಿಣಿತಿ ಛೋಪ್ರಾ ಸಲ್ಮಾನ್ ಜತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ದಬ್ಬಾಂಗ್ -3 ಚಿತ್ರದಲ್ಲಿ ಫಿಮೇಲ್ ಲೀಡ್ ಪಾತ್ರದಲ್ಲಿ ಪರಿಣಿತಿ ಮಿಂಚಲಿದ್ದಾಳೆ ಎಂದು ವದಂತಿ ಹರಡಿದೆ. ಆದ್ರೆ ಇದುವರೆಗೂ ಯಾವುದೇ ಫೈನಲ್ ಆಗಿಲ್ಲ.
ಈ ಚಿತ್ರವನ್ನು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ದಬ್ಬಾಂಗ್ -3 ಚಿತ್ರದಲ್ಲಿ ಈ ಹಿಂದೆ ದಬ್ಬಾಂಗ್ ಚಿತ್ರದಲ್ಲಿ ನಟಿಸಿದ್ದ ಸೋನಾಕ್ಷಿ ಪಾತ್ರದಲ್ಲಿ ಪರಿಣಿತಿ ಬರಲಿದ್ದಾಳಂತೆ. ಇದಕ್ಕಾಗಿ ಪರಿಣಿತಿ ಛೋಪ್ರಾಳನ್ನು ಚಿತ್ರಕ್ಕಾಗಿ ಸಂಪರ್ಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸೋನಾಕ್ಷಿ ಸಿನ್ಹಾ ಬೇರೆ ಚಿತ್ರಗಳಲ್ಲಿ ಬ್ಯೂಸಿ ಇದ್ದಾಳೆ. ಆದ್ದರಿಂದ ಆಕೆಯ ಜತೆಗೆ ಸಲ್ಮಾನ್ ನಟಿಸುತ್ತಿಲ್ಲ. ಆದ್ದರಿಂದ ಚಿತ್ರ ತಂಡ ಬೇರೆ ನಟಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದುವರೆಗೂ ನಟಿ ಯಾರು ಎಂಬುದಕ್ಕೆ ಫೈನಲ್ ಆಗಿಲ್ಲ.
ಇನ್ನೂ ಮೊನ್ನೆ ಸಲ್ಮಾನ್ ಖಾನ್ ಹಾಗೂ ಪರಿಣಿತಿ ಇಬ್ಬರು ರೆಸ್ಟೌರೆಂಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಸಾನಿಯಾ ಮಿರ್ಜಾ ಆಟೋಬಯಾಗ್ರಫಿ ಕಾರ್ಯಕ್ರಮದಲ್ಲಿ ಜತೆಯಾಗಿ ಕಂಡು ಬಂದಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ