Publish Date: Sat, 17 Mar 2018 (06:06 IST)
Updated Date: Sat, 17 Mar 2018 (06:10 IST)
ಮುಂಬೈ : ಈ ಹಿಂದೆ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟ್ವೀಟ್ ಮಾಡಿದ ಖ್ಯಾತ ಬಾಲಿವುಡ ನಟ ಇರ್ಫಾನ್ ಖಾನ್ ಅವರು ಈಗ ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಟ ಇರ್ಫಾನ್ ಖಾನ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಅನೇಕ ರೀತಿಯ ಊಹಾಪೋಹಗಳು ಕೇಳಿ ಬಂದಿದ್ದು, ಇದೀಗ ಅವರು ತಾವು ‘ನ್ಯೂರೋಎಂಡೋಕ್ರೀನ್ ಟ್ಯೂಮರ್’ ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು,’ಅನಿರೀಕ್ಷಿತವಾಗಿರುವುದು ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಕಳೆದ ಕೆಲ ದಿನಗಳಿಂದ ನಾನು ಅರಿತಿದ್ದೇನೆ.
ನನಗೆ ನ್ಯೂರೋಎಂಡೋಕ್ರೀನ್ ಟ್ಯೂಮರ್ ಇದೆ ಎಂಬುದನ್ನು ಅರಿಗಿಸಿಕೊಳ್ಳುವುದು ಕಷ್ಟಕರವಾಗಿದೆ. ಆದರೆ ನನ್ನ ಸುತ್ತಮುತ್ತ ಇರುವವರ ಪ್ರೀತಿ ಮತ್ತು ಧೈರ್ಯ ಹಾಗೂ ನನ್ನೊಳಗಿರುವ ಪ್ರೀತಿ ಮತ್ತು ಧೈರ್ಯ ನನಗೆ ಭರವಸೆಯನ್ನು ನೀಡಿದೆ. ಈ ಪಯಣ ನನ್ನನ್ನು ದೇಶದ ಹೊರಗೆ ಕರೆದೊಯ್ದಿದೆ. ಎಲ್ಲರಿಗೂ ತಮ್ಮ ಹಾರೈಕೆಗಳನ್ನು ಕಳುಹಿಸುವಂತೆ ಕೋರುತ್ತಿದ್ದೇನೆ. ಹರಿಯ ಬಿಟ್ಟಂತಹ ವದಂತಿಗಳ ಬಗ್ಗೆ ಹೇಳುವುದಾದರೆ ನ್ಯೂರೋ ಯಾವತ್ತೂ ಮೆದುಳಿಗೆ ಸಂಬಂಧಿಸಿದ ವಿಚಾರವಲ್ಲ. ಹಾಗೂ ಗೂಗಲ್ ಮಾಡುವುದು ಸಂಶೋಧನೆಯ ಅತ್ಯಂತ ಸುಲಭ ವಿಧಾನವಲ್ಲ. ನಾನು ಮತ್ತೆ ಹೊಸ ಕಥೆಗಳೊಂದಿಗೆ ಬರುತ್ತೇನೆಂಬ ಆಶಾಭಾವನೆಯಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ