ನಟ ಮುಮ್ಮಟ್ಟಿ ಯುವತಿಯಾಗಿದ್ದರೆ ಇವರು ಅವರನ್ನು ರೇಪ್ ಮಾಡುತ್ತಿದ್ದರಂತೆ!

Webdunia
ಗುರುವಾರ, 19 ಜುಲೈ 2018 (07:18 IST)
ಕೇರಳ : ಮಾಲಿವುಡ್ ಮೆಗಾ ಸ್ಟಾರ್ ಮಮ್ಮುಟಿ ಅವರ ಕುರಿತು ಸಮಾರಂಭವೊಂದರಲ್ಲಿ ಖ್ಯಾತ ನಿರ್ದೇಶಕರೊಬ್ಬರು ಮಾತನಾಡಿದ ರೀತಿ ಎಲ್ಲರ ಮುಖದಲ್ಲೂ ನಗು ತರಿಸುವಂತಿದ್ದರೂ ಕೂಡ  ಖ್ಯಾತ ನಿರ್ದೇಶಕರಾಗಿ ಹೀಗೆ ಮಾತನಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕೂಡ ಈಗ ಕೇಳಿಬರುತ್ತಿದೆ.


ನಟ ಮಮ್ಮುಟಿ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ, ರಾಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ತಮಿಳು ಚಿತ್ರ 'ಪೆರೆನ್ಬು' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಕಳೆದ ಭಾನುವಾರ ಚೆನ್ನೈನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸತ್ಯರಾಜ್, ಮಮ್ಮುಟಿ,ಅಂಜಲಿ ಅಮೀರ್ ಸೇರಿದಂತೆ ಕಾಲಿವುಡ್ ಸಿನಿಗಣ್ಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ನಿರ್ದೇಶಕ ಮಿಶ್ಕಿನ್ ಕೂಡ ಭಾಗವಹಿಸಿದ್ದರು.


ನಿರ್ದೇಶಕ ಮಿಶ್ಕಿನ್ ಅವರು ಈ ಕಾರ್ಯಕ್ರಮದ ಕುರಿತು  ಮಾತನಾಡುತ್ತಾ, ಮುಮ್ಮಟ್ಟಿ, ನೀವು ಶ್ರೇಷ್ಠ ನಟ ಎನ್ನುವುದನ್ನು ಸಾಬೀತುಪಡಿಸುವ ದೃಶ್ಯವೊಂದು ಈ ಚಿತ್ರದಲ್ಲಿದೆ. ನಾನು ಈ ಮಾತನ್ನು ಹೇಳುವುದನ್ನು ಗಮನವಿಟ್ಟು ಕೇಳಿ. ಈ ಚಿತ್ರದಲ್ಲಿ ಇನ್ನಾರಾದರೂ ಈ ಪಾತ್ರ ಮಾಡಿದ್ದರೆ ನನಗೆ ಭಯವಾಗುತ್ತಿತ್ತು.ಈ ವಿಚಾರವಾಗಿ ರಾಮ್ ಅವರನ್ನು ನಾನು ಅಭಿನಂದಿಸುವೆ. ಮುಮ್ಮಟ್ಟಿ ಯುವತಿಯಾಗಿದ್ದರೆ ನಾನು ಅವರ ಪ್ರೇಮದಲ್ಲಿ ಬೀಳುತ್ತಿದ್ದೆ ಇಲ್ಲವೆ ಅತ್ಯಾಚಾರ ಮಾಡುತ್ತಿದ್ದೆ.. ಅವರೊಬ್ಬ ಉತ್ತಮ ನಟ’ ಎಂದು ಹೇಳಿದ್ದಾರೆ.


ಆದರೆ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಮಮ್ಮುಟಿಯವರ ಅಭಿನಯವನ್ನು ಹೊಗಳುವ ಭರದಲ್ಲಿ ಹೆಸರಾಂತ ನಿರ್ದೇಶಕರೇ ಪಬ್ಲಿಕ್ ಆಗಿ ರೇಪು ಗೀಪು ಅಂತ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಹಲವರದ್ದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ