ನಟ ನಟಿಯರ ಮಕ್ಕಳು ಸಿನಿಮಾ ರಂಗಕ್ಕೆ ಬರೋದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಅದೆಷ್ಟೋ ಉದಾಹರಣೆಗಳಿವೆ. ನಟ ಅಭಿಷೇಕ್ ಬಚ್ಚನ್, ರಣ್ ಬೀರ್ ಕಪೂರ್, ಸೋನಾಕ್ಷಿ,ಆಲಿಯಾ ಭಟ್, ಸೋನಮ್ ಕಪೂರ್, ವರುಣ್ ಧವನ್, ಹೀಗೆ ಸಾಲು ಸಾಲು ಉದಾಹರಣೆಗಳಿವೆ.ಇದೀಗ ಶಾರುಖ್ ಮಕ್ಕಳನ್ನು ಕೂಡ ಬಾಲಿವುಡ್ ಗೆ ಕರೆತರೋದಕ್ಕೆ ತೆರೆಮರೆಯಲ್ಲಿ ಪ್ಲಾನ್ ನಡೆಯುತ್ತಿದೆಯಂತೆ. ಹಾಗಂಥ ಅವರನ್ನು ಕರೆತರುತ್ತಿರೋದು ಶಾರುಖ್ ಅಲ್ಲ.
ಶಾರುಖ್ ಪುತ್ರರಾದ ಆರ್ಯನ್ ಹಾಗೂ ಅಬ್ ರಾಮ್ ಅವರು ಈಗಾಗಲೇ ಅನೇಕ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾರೆ. ಕಿಂಗ್ ಖಾನ್ ಹಿರಿಯ ಪುತ್ರ ಆರ್ಯನ್ ಅವರನ್ನು ಸಿನಿಮಾ ರಂಗಕ್ಕೆ ಕರೆತರುವ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಮಾತುಗಳು ಕೇಳಿ ಬಂದಿದ್ದವು.ಆದ್ರೆ ಅದು ಅಲ್ಲಿಗೆ ತಣ್ಣಗಾಗಿತ್ತು.
ಆದ್ರೀಗ ಕರಣ್ ಅವರು ಆರ್ಯನ್ ಹಾಗೂ ಅಬ್ ರಾಮ್ ನನ್ನು ತಮ್ಮ ಸಿನಿಮಾದ ಮೂಲಕ ಲಾಂಚ್ ಮಾಡೋ ಪ್ಲಾನ್ ನಲ್ಲಿದ್ದಾರಂತೆ.ಆದ್ರೆ ಆರ್ಯನ್ ಅವರು ತಮ್ಮ ಪದವಿ ಮುಗಿಸಿದ ಮೇಲೆಯೇ ಅವರನ್ನು ಸಿನಿಮಾರಂಗಕ್ಕೆ ಕರೆತರುತ್ತಾರೆ ಕರಣ್.
ಇನ್ನು ಕಿಂಗ್ ಖಾನ್ ಮುದ್ದಿನ ಮಗ ಅಬ್ ರಾಮ್ ಗೆ ಮುಂದಿನ ತಿಂಗಳಿಗೆ ಮೂರು ವರ್ಷವಾಗುತ್ತೆ. ಈ ಕ್ಯೂಟ್ ಕಂದನನ್ನು ಬಾಲಿವುಡ್ ಗೆ ಕರೆತರುವ ಪ್ಲಾನ್ ಕರಣ್ ವರದ್ದು.ಆದ್ರೆ ಮೊದಲು ಹಿರಿಯ ಪುತ್ರ ಆರ್ಯನ್ ಅವರನ್ನು ಕರೆ ತಂದ ಬಳಿಕ ಅಬ್ ರಾಮ್ ನನ್ನು ಕರೆ ತರಬೇಕು ಅಂತಾ ಯೋಚಿಸುತ್ತಿದ್ದಾರಂತೆ ಕರಣ್.