Select Your Language

Notifications

webdunia
webdunia
webdunia
webdunia

ನಾಗರಹಾವು ಸಿನಿಮಾದ ಪೋಸ್ಟರ್ ರಿಲೀಸ್

NAGARAHAVU movie
ಬೆಂಗಳೂರು , ಗುರುವಾರ, 28 ಏಪ್ರಿಲ್ 2016 (12:17 IST)
1970ರಲ್ಲಿ ತೆರೆ ಕಂಡ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾವನ್ನು ಯಾವೊಬ್ಬ ಚಿತ್ರರಸಿಕನೂ ಕೂಡ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಇಮೇಜ್ ತಂದುಕೊಟ್ಟ ಸಿನಿಮಾವಿದು.ಈ ಸಿನಿಮಾವನ್ನು ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದ ತ್ರೀಡಿ ಪೋಸ್ಟರ್ ರಿಲೀಸ್ ಆಗಿದೆ.

ಕೋಡಿ ರಾಮಕೃಷ್ಣ ತಮ್ಮ ನಿರ್ದೇಶನದಲ್ಲಿ ನಾಲ್ಕು ವರ್ಷಗಳ ಹಿಂದೆ ನಾಗರಹಾವು ಸಿನಿಮಾ ಆರಂಭಿಸಿದ್ದರು. ಇದರಲ್ಲಿ ಮೋಹಕತಾರೆ ರಮ್ಯ-ದೂದ್‌ಪೇಡಾ ದಿಗಂತ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ಕೋಡಿ ರಾಮಕೃಷ್ಣ ನಿರ್ದೇಶನದ ನಾಗರಹಾವು ಚಿತ್ರದ 3 ಡಿ ಪೋಸ್ಟರ್ ಇತ್ತೀಚೆಗೆ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್‌ನಲ್ಲಿ ಬಿಡುಗಡೆಯಾಯಿತು. ವಿಷ್ಣುವರ್ಧನ್ ಅಳಿಯ ಅನಿರುದ್ದ್ ಇದನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ನಾಗರಹಾವು ಚಿತ್ರದ ನಿರ್ಮಾಪಕ ಸಾಜಿದ್ ಖುರೇಷಿಯವರನ್ನು ವಿಷ್ಣು ಅಭಿಮಾನಿಗಳ ಸಂಘದಿಂದ ಸನ್ಮಾನಿಸಲಾಯಿತು.

ಇನ್ನು ನಾಗರಹಾವು ಸಿನಿಮಾ ರಮ್ಯಾ ಅವರು ಅಭಿನಯಿಸುತ್ತಿರುವ ಕೊನೆಯ ಸಿನಿಮಾ. ಈ ಹಿಂದೆಯೇ ರಮ್ಯಾ ಅವರು ನಾನು ಒಪ್ಪಿಕೊಂಡಿರುವಂತಹ ಸಿನಿಮಾಗಳನ್ನು ಮುಗಿಸಿಕೊಡುತ್ತೇನೆ ಬೇರೆ ಸಿನಿಮಾದಲ್ಲಿ ಇನ್ಮೇಲೆ ಅಭಿನಯಿಸಲ್ಲ ಅಂತಾ ಹೇಳಿದ್ದರು.ಹಾಗಾಗಿ ರಮ್ಯಾ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಆದಿತ್ಯಾ ಸಿನಿಮಾ ಕ್ಲಾಪ್ ಹೇಳಿದ ನಟ ದರ್ಶನ್ ತೂಗುದೀಪ್