ದೀಪಿಕಾ ಹಾಗೂ ಪ್ರಿಯಾಂಕಾ ಛೋಪ್ರಾ ಅಂತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಲಿವುಡ್‌ನಲ್ಲೂ ತಮ್ಮ ಲಕ್ ಪ್ರದರ್ಶನದ ಬಗ್ಗೆ ಪ್ಲ್ಯಾನ್ ಮಾಡಿಲ್ಲ ಎನ್ನಿಸುತ್ತದೆ. ಆದ್ರೆ ಅನುಷ್ಕಾ ಶರ್ಮಾಗೆ ಸದ್ಯಕ್ಕಂತೂ ತಮ್ಮ ಸಹೋದ್ಯೋಗಿಗಳಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
28 ವರ್ಷದ ನಟಿ ಅನುಷ್ಕಾ, 'ದಿಲ್ ಧಡಕನ್ ದೋ' ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ ಜತೆಗೆ ಅನುಷ್ಕಾ ನಟಿಸಿದ್ದಳು. ಪ್ರಿಯಾಂಕಾ ಅವರ ಸಾಧನೆಯಿಂದ ಅನುಷ್ಕಾಗೆ ಸಂತೋಷವಾಗಿದೆಯಂತೆ.
ದೀಪಿಕಾ-ಪ್ರಿಯಾಂಕಾ ಮಾಡುತ್ತಿರುವ ಕೆಲಸಕ್ಕೆ ಗ್ರೇಟ್ ಎಂದಿರುವ ಅನುಷ್ಕಾ, ಇಬ್ಬರು ಹಾಲಿವುಡ್‌ನಲ್ಲೂ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ಪ್ರಿಯಾಂಕಾ ಛೋಪ್ರಾ ತುಂಬಾ ಸಾಧನೆ ಮಾಡಿದ್ದಾಳೆ. ಅಲ್ಲಿ ಅವಳ ಹೆಸರು ಎಲ್ಲರಿಗೂ ಗೊತ್ತಿದೆ. ನನಗೆ ಹೆಮ್ಮ ಎನ್ನಿಸುತ್ತದೆ ಎಂದು ಸಂದರ್ಶನದ ವೇಳೆ ಅನುಷ್ಕಾ ಶರ್ಮಾ ತಿಳಿಸಿದ್ದಾಳೆ.
ಎನ್‌ಎಚ್ 10 ಸ್ಟಾರ್ ಅನುಷ್ಕಾಗೆ ಯಾವುದೇ ಪ್ಲ್ಯಾನ್ ಇಲ್ವಂತೆ.. ಹಾಲಿವುಡ್ ಸಿನಿಮಾ ಮಾಡಲು ಯಾವುದೇ ಕನಸು ಇಲ್ಲ.. ನನ್ನ ಜೀವನದಲ್ಲಿ ನಾನು ಇದಕ್ಕಾಗಿ ಪ್ಲ್ಯಾನ್ ಮಾಡಿಲ್ಲ.ಈ ಕ್ಷಣಗಾಗಿ ನಾನು ಬದುಕುತ್ತೇನೆ.ಕೆಲಸ ಮಾಡುತ್ತೇನೆ ಎಂದು ಅನುಷ್ಕಾ ಶರ್ಮಾ ತಿಳಿಸಿದ್ದಾಳೆ.
ಬಾಲಿವುಡ್‌ನಲ್ಲೂ ನಾನು ಯಾವುದೇ ಪ್ಲ್ಯಾನ್ ಮಾಡದೇ ಬಂದವಳು. ಹಾಗಾಗಿ ಹಾಲಿವುಡ್‌ನಲ್ಲೂ ಚಿತ್ರಗಳನ್ನು ಮಾಡಬೇಕಾದ್ದರೆ ತುಂಬಾ ದೂರದ ವಿಷಯ ಎಂದು ಅನುಷ್ಕಾ ಶರ್ಮಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ