Select Your Language

Notifications

webdunia
webdunia
webdunia
webdunia

ಕರೀನಾ ಕಪೂರ್‌ ಹಾಗೇ ಸೆಲ್ಫಿ ತೆಗೆದುಕೊಳ್ಳಬೇಕೇ? ಈ ಅಪ್ಲಿಕೇಷನ್ ಕ್ಲಿಕ್ ಮಾಡಿ

ಕರೀನಾ ಕಪೂರ್‌ ಹಾಗೇ ಸೆಲ್ಫಿ ತೆಗೆದುಕೊಳ್ಳಬೇಕೇ? ಈ ಅಪ್ಲಿಕೇಷನ್ ಕ್ಲಿಕ್ ಮಾಡಿ
ಹೈದ್ರಾಬಾದ್ , ಸೋಮವಾರ, 27 ಜೂನ್ 2016 (13:54 IST)
ಪ್ರತಿಯೊಬ್ಬ ಸೆಲೆಬ್ರಿಟಿಗೂ ಫ್ಯಾನ್ಸ್‌ಗಳು ಇದ್ದೆ ಇರ್ತಾರೆ... ತಮ್ಮ ಸೆಲೆಬ್ರಿಟಿಯ ಯಾವುದೇ ಚಿತ್ರವಾಗಲಿ ಯಾವೊಬ್ಬ ಅಭಿಮಾನಿಯೂ ಮಿಸ್ ಮಾಡಿಕೊಳ್ಳುವುದಿಲ್ಲ. ಫೇವರೆಟ್ ನಟಿಯೊಬ್ಬಳ ಹಾಗೂ ನಟನ ಚಿತ್ರವನ್ನು ಹಾಗೂ ಸೆಲ್ಫಿಯನ್ನ ತೆಗೆದುಕೊಳ್ಳಲು ಅಭಿಮಾನಿಗಳು ಕಾತುರರಾಗಿರುತ್ತಾರೆ. ಇನ್ನೂ ಇಂಥದ್ದೇ ಅವಕಾಶ ನೀವೂ ಪಡೆದುಕೊಳ್ಳಬಹುದು. 


ಹೈದ್ರಾಬಾದ್‌ನ ಕರೀನಾ ಕಪೂರ್ ಫಿಮೇಲ್ ಫ್ಯಾನ್ಸ್ ಒಂದು ಕ್ರಿಯೇಟಿವ್ ಆಗಿರೋ ಪ್ಲ್ಯಾನ್ ಮಾಡಿದ್ದಾರೆ. ಐದು ಜನ ಯುವತಿಯರ ಗ್ರೂಪ್ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವ ಆ್ಯಪ್‌ನ್ನು ಡಿಸೈನ್ ಮಾಡಿದ್ದಾರೆ. ಈ ಆ್ಯಪ್ ನಿಮ್ಮ ಸೆಲ್ಫಿಗೆ ಹೆಲ್ಪ್ ಮಾಡಲಿದೆ. 
 
 
ಅಲ್ಲದೇ ಈ ಗ್ರೂಪ್ ಕೂಡ ಕರೀನಾ ಕಪೂರ್‌ಗೆ ರಿಕ್ವೆಸ್ಟ್ ಕಳಿಸಿದ್ದಾರಂತೆ. ಅಲ್ಲದೇ ಆ್ಯಪ್‌ಗೆ ಪ್ರವೇಶಿಸಿದ್ರೆ ಬೊಬೋ ನಿಮಗೆ ಡೆಮೋ ನೀಡಲಿದ್ದಾರೆ. ಆ್ಯಪ್‌ನಲ್ಲಿ ಸೆಲ್ಫಿ ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತು ಕರೀನಾ ತಿಳಿಸಲಿದ್ದಾರೆ. ಆದ್ದರಿಂದ ಕರೀನಾ ಹಾಗೇ ಪೋಸ್ ಕೊಟ್ಟು ಫೊಟೋ ತೆಗೆಸಿಕೊಳ್ಳುವವರಿಗೆ ಈ ಆ್ಯಪ್ ಸಹಾಯಕಾರಿಯಾಗಲಿದೆ. ಅಲ್ಲದೇ ಯುವತಿಯರ ಪ್ಲ್ಯಾನ್‌ ನೋಡಿ ಕರೀನಾ ಕಪೂರ್ ಮೆಚ್ಚಿದ್ದಾರಂತೆ. 
 
ಆದ್ದರಿಂದ ಸೆಲ್ಫಿಗೆ ತಯಾರಾಗಿ... ಇನ್ಮುಂದೆ ಈ ಆ್ಯಪ್ ನಿಮ್ಮ ಮುಂದೆ ಬರಲಿದೆ. ಅಲ್ಲಿಯವರೆಗೂ ಕಾಯಬೇಕು ಅಷ್ಟೇ. ಈ ವಿಡಿಯೋದಲ್ಲಿ ಸೆಲ್ಫಿಗೆ ಯಾವ ರೀತಿ ಫರಫೆಕ್ಟ್ ಪೋಸ್ ನೀಡ್ಬೇಕು ಎಂದು ಕರೀನಾ ಕಪೂರ್ ಟಿಪ್ಸ್ ನೀಡಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದ ಅತ್ಯಾಚಾರ ಸಂತ್ರಸ್ತ ಯುವತಿಯಿಂದ ಸಲ್ಮಾನ್‌ಗೆ ನೋಟಿಸ್