Select Your Language

Notifications

webdunia
webdunia
webdunia
webdunia

ಹಮ್ಟಿ ಶರ್ಮಾ ಕೀ ಹುಲ್ಹೆನಿಯಾದ ಸೀಕ್ವೆಲ್ ನಲ್ಲಿ ಆಲಿಯಾ- ವರುಣ್?

ಹಮ್ಟಿ ಶರ್ಮಾ ಕೀ ಹುಲ್ಹೆನಿಯಾದ ಸೀಕ್ವೆಲ್ ನಲ್ಲಿ ಆಲಿಯಾ- ವರುಣ್?
ಮುಂಬೈ , ಮಂಗಳವಾರ, 3 ಮೇ 2016 (12:11 IST)
ಈ ವರ್ಷ ಬಾಲಿವುಡ್ ಆಲಿಯಾ ಪಾಲಿಗೆ ಬಂಪರ್. ಒಂದರ ಹಿಂದೆ ಒಂದು ಸಿನಿಮಾಗಳು ಬಾಲಿವುಡ್ ನಲ್ಲಿ ಆಲಿಯಾ ಭಟ್ ಅವರನ್ನು ಅರಸಿಕೊಂಡು ಬರುತ್ತಿದೆ. ಕಪೂರ್ ಆಡಂ ಸನ್ಸ್ ಸಿನಿಮಾ ಗೆದ್ದ ಖುಷಿಯಲ್ಲೇ ಆಲಿಯಾ ಈಗ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 
ಉಡ್ತಾ ಪಂಜಾಬ್ ಹಾಗೂ ಶಾರುಖ್ ಖಾನ್ ಅವರೊಂದಿಗೂ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ಆಲಿಯಾ ಭಟ್ ಹೆಸರು ಕೇಳಿ ಬರುತ್ತಿದೆ.
 
ಈ ಹಿಂದೆ ತೆರೆ ಕಂಡ ಹಮ್ಟಿ ಶರ್ಮಾ ಕೀ ದುಲ್ಹೆನಿಯಾ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ವರುಣ್ ಧವನ್ ಅವರು ಜೊತೆಯಾಗಿ ಅಭಿನಯಿಸಿದ್ದರು. ಇದೀಗ ಇದೇ ಸಿನಿಮಾದ ಸೀಕ್ವೆಲ್ ನ್ನು ಮಾಡೋದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲೂ ಆಲಿಯಾ ಭಟ್ ಹಾಗೂ ವರುಣ್ ಧವನ್ ಅವರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ ಅಂತಾ ಹೇಳಲಾಗುತ್ತಿದೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಆಲಿಯಾ ಹಾಗೂ ತಾನು ಜೊತೆಯಾಗಿರುವ ಹಿಂಬದದಿಗೆ ಮುಖ ಮಾಡಿರುವ ಫೋಟೋ ವೊಂದನ್ನು ಶೇರ್ ಮಾಡಿದ್ದಾರೆ ಅಲ್ಲದೇ ಆರ್ ದೇ ಕಮ್ ಬ್ಯಾಕ್ ಅಂತಾ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. ಆ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಆಲಿಯಾ.
 
ಇನ್ನು ಅಭಿಮಾನಿಗಳು ಅಂತಾ ಫುಲ್ ಕಾತುರದಲ್ಲಿದ್ದಾರೆ. ವರುಣ್ ಧವನ್ ಹಾಗೂ ಆಲಿಯಾ ಭಟ್ ಈಗಾಗಲೇ ಬಾಲಿವುಡ್ ನ ಸೂಪರ್ ಹಿಟ್ ಜೋಡಿಗಳು ಅಂತಾ ಗುರುತಿಸಿಕೊಂಡವರು. ಹಾಗಾಗಿ ಅವರಿಬ್ಬರನ್ನು ಮತ್ತೆ ತೆರೆ ಮೇಲೆ ಜೊತೆಯಾಗಿ ನೋಡುವ ಅವಕಾಶ ಸಿಗುತ್ತಿದೆಯಲ್ಲಾ ಅಂತಾ ಅಭಿಮಾನಿಗಳು ಫುಲ್ ಲೆಕ್ಕಾಚಾರ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಮ ಸಿನಿಮಾ ಶೂಟಿಂಗ್ ಅಭಿಷೇಕ್ ಬಚ್ಚನ್ ಆರಂಭ