Select Your Language

Notifications

webdunia
webdunia
webdunia
webdunia

ಬಟ್ಟೆ ಬಿಚ್ಚಿದ ಹೃತಿಕ್ ರೋಷನ್ ಜೊತೆ ಲೀಸಾ

ಹೃತಿಕ್ ರೋಷನ್
Mumbai , ಗುರುವಾರ, 29 ಡಿಸೆಂಬರ್ 2016 (12:12 IST)
ಬಾಲಿವುಡ್ ಗ್ರೀಕ್ ಗಾಡ್  ಹೃತಿಕ್ ರೋಷನ್ ಮತ್ತು ರೂಪದರ್ಶಿ ಮತ್ತು ನಟಿ ಲೀಸಾ ಹೆಡನ್ ಮೈಚಳಿ ಬಿಟ್ಟು ಕೊಟ್ಟಿರುವ ಪೋಸು ಈಗ ಪಡ್ಡೆಗಳ ಹೃದಯದಲ್ಲಿ ರೈಲಿನಂತೆ ಓಡುತ್ತಿದೆ. ಹೃತಿಕ್ ಬಟ್ಟೆ ಬಿಚ್ಚುರುವ ಈ ಫೋಟೋದಲ್ಲಿ ಲೀಸಾ ಅಪ್ಪಿಕೊಂಡಿರುವ ಭಂಗಿ ಪಡ್ಡೆಗಳ ಹಳ್ಳಕ್ಕೆ ಕೆಡವುತ್ತಿದೆ.
 
ಇಂಗ್ಲಿಷ್ ನಿಯತಕಾಲಿಕೆಗಾಗಿ ನಡೆದ ಫೋಟೋ ಶೂಟ್ ಇದು. ಹೃತಿಕ್ ಏನೋ ತಮ್ಮ ಹುರಿಗಟ್ಟಿದ ದೇಹ ಪ್ರದರ್ಶಿಸಿದ್ದರೆ, ಲೀಸಾ ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಪಡ್ಡೆಗಳನ್ನು ಉದ್ದೇಶವಾಗಿಟ್ಟುಕೊಂಡು ತೆಗೆದಿರುವ ಫೋಟೋ ಇದು ಎನ್ನಿಸುತ್ತದೆ.
 
ಹೃತಿಕ್ ಅವರ ಕಾಬಿಲ್ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಅವರ ಹಿಂದಿನ ಚಿತ್ರ ಮೊಹೆಂಜದಾರೋ ಫ್ಲಾಪ್ ಆದ ಕಾರಣ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರ ಜನವರಿ 25ಕ್ಕೆ ತೆರೆಗೆ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಯಾರು ಗೊತ್ತಾ?