Select Your Language

Notifications

webdunia
webdunia
webdunia
webdunia

ಬಾಲಿವುಡ್'ನ ಮರೆಯಲಾಗದ ಟಾಪ್ ಕಾಂಟ್ರೊವರ್ಸಿ

ಬಾಲಿವುಡ್'ನ ಮರೆಯಲಾಗದ ಟಾಪ್ ಕಾಂಟ್ರೊವರ್ಸಿ
ಮುಂಬೈ , ಸೋಮವಾರ, 3 ಜುಲೈ 2017 (20:53 IST)
ಮುಂಬೈ:ಅತಿ ಹೆಚ್ಚು ವಿವಾದಗಳಿಗೂ ಹಾಗೂ ಬಾಲಿವುಡ್ ಗೂ ಅದೇನೋ ನಂಟು. ಚುಚ್ಚು ಮಾತುಗಳು, ಉದ್ದೇಶ ಪೂರ್ವಕ ಅನಗತ್ಯ ಪದ ಪ್ರಯೋಗ, ವಿವಾದಗಳ ಮೂಲಕ ಯಾವಗಲು ಸುದ್ದಿಯಲ್ಲಿರಲು ಬಾಲಿವುಡ್ ನಟ ನಟಿಯರು ಬಯಸುತ್ತಾರೆ. ಹೀಗೆ ಬಾಲಿವುಡ್ ನಲ್ಲಿ ಅತಿ ಹೆಚ್ಚು ವಿವಾದಗಳನ್ನು ಸೃಷ್ಟಿ ಮಾಡಿದ ಕೆಲ ಅಂಶಗಳನ್ನು ನಾವು ಇಲ್ಲಿ ನೋಡಬಹುದು
 
ಬಾಲಿವುಡ್ ನ ಇಬ್ಬರು ಮಹಾನ್ ನಟರಾದ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ನಡುವಿನ ಶೀತಲ ಸಮರ. ಇತ್ತೀಚೆಗೆ ನಟ ಆಮೀರ್ ಖಾನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು. ಶಾರುಖ್ ಯಾವಾಗ್ಲೂ ನನ್ನ ಪಾದ್ದವನ್ನು ನೆಕ್ಕುತ್ತಾನೆ ಮತ್ತು ನಾನು ಯಾವಗ್ಲೂ ಅವನಿಗೆ ಬಿಸ್ಕೇಟ್ ಹಾಕುತ್ತಿರುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಅದರ ಜತೆಗೆ ಇನ್ನೊಂದ್ದು ವಿಷಯವನ್ನೂ ಹೇಳಿದ್ದರು ನಮ್ಮ ಮನೆ ನಾಯಿಯ ಹೆಸರು ಶಾರುಖ್ ಅದರ ಬಗ್ಗೆ ನಾನು ಹೇಳಿದ್ದು ಅಂತಲೂ ಉಲ್ಲೇಖಿಸಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿದ್ದ ಶಾರುಖ್ ಆಮೀರ್ ಇಬ್ಬರು ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ. ನನ್ನಿಬ್ಬರು ಮಕ್ಕಳು ಆಮೀರ್ ಅವರ ಅಭಿಮಾನಿಗಳಾಗಿದ್ದರು ಎಂದು ತಿಳಿಸಿದ್ದರು. ಈ ವಿಷಯ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ, ವಿವಾದಕ್ಕೆ ಕಾರಣವಾಯ್ತು. 
 
webdunia
ನಟಿ ಮಲ್ಲಿಕಾ ಶರಾವತ್ ರ ಇತ್ತೀಚಿನ ಒಂದು ವಿಚಿತ್ರವಾದ ಉಡುಪು ಸಾಕಷ್ಟು ಚರ್ಚೆಗೆ ಕಾರಣವಾಯ್ತು. ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರೀಮಿಯರ್ ಶೋ ಒಂದರಲ್ಲಿ ಮಲ್ಲಿಕಾ ತೊಟ್ಟ ವಿಚಿತ್ರ ಉಡುಪು ಸಾಕಷ್ಟು ಟೀಕೆಗೆ ಗುರಿಯಾಯ್ತು. ಅವರೇ ಮಾಡಿದ ಟ್ವಿಟರ್ ಪೋಸ್ಟ್ ನಲ್ಲಿ ಹಲವರು ಮಲ್ಲಿಕಾರಿಗೆ ಇದೊಂದು ವರ್ಸ್ಟ್ ಔಟ್ ಫಿಟ್ ಮತ್ತು ಫ್ಯಾಷನ್ ಕ್ರೈಂ ಎಂದು ಟೀಕಿಸಿದರು.
 

webdunia
ಸಾಮಾನ್ಯವಾಗಿ ನಟ-ನಟಿಯರು ತಮ್ಮ ಗಮನ ಸೆಳೆಯಲು ಏನೇನೋ ಸರ್ಕಸ್ ಗಳನ್ನು ಮಾಡ್ತಾರೆ.  ಆದರೆ ನಟಿ ರಾಧಿಕಾ ಆಪ್ಟೆ ಒಂದು ಹೆಜ್ಜೆ ಮುಂದೆ ಹೋಗಿ ಟಾಪ್ ಲೆಸ್ ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು. ಆದರೆ ಈ ಬಗ್ಗೆ ರಾಧಿಕಾ ಈ ಫೋಟೋದಲ್ಲಿರುವ ಹುಡುಗಿ ನನ್ನನ್ನು ಹೋಲುತ್ತಾಳೆ. ಆದರೆ ಅದು ನಾನಲ್ಲ ಎಂದು ಹೇಳಿಕೆ ನೀಡಿದರು. ಆದರೆ ಬದ್ಲಾಪುರ್ ಚಿತ್ರದ ಪ್ರಮೋಷನ್ ಗಾಗಿ ರಾಧಿಕಾ ಇಂತದ್ದೊಂದು ಫೋಟೋ ಪೋಸ್ಟ್ ಮಾಡಿದ್ದಾರೆ ಎಂಬುದು ಹಲವರ ಅಭಿಪ್ರಾಯ. 
 
ನಟಿ ಕರಿನಾ ಕಪೂರ್ ಅವರ ಅರ್ಧ ಹಿಂದು ಮಹಿಳೆ ಹಾಗೂ ಅರ್ಧ ಮುಸ್ಲೀಂ ಮಹಿಳೆಯಂತೆ ಬಿಂಬಿತವಾಗುವ ರೂಪಾಂತರ ಫೋಟೋ ಹಿಮಾಲಯ ಧ್ವನಿ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ದೇಶಾದ್ಯಂತ ಹಲವು ವಿದಾಕ್ಕೆ ಕಾರಣವಾಯಿತು. 
 
ಖ್ಯಾತ ನಟಿ ಮಹಿಮಾ ಚೌದರಿ ಹೆಸರು ವಿದೇಶಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ಪ್ರಕಟವಾಗುವ ಮೂಲಕ ಮಹಿಮ ಅಮತ್ತೆ ಸುದ್ದಿಯಾದರು. 
 
ಇನ್ನು ನಟಿ ಸೋನಮ್ ಕಪೂರ್ ಅವರ ಎರಡು ಹೇಳಿಕೆ ಬಾಲಿವುಡ್ ಜಗತ್ತಿನಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ನಟಿ ಐಶ್ವರ್ಯಾ ರೈ ಕುರಿತಾಗಿ ತಾನು ಮತ್ತು ಐಶ್ವರ್ಯಾ ಬೇರೆ ಬೇರೆ ಜನರೇಶನ್ ಗೆ ಸೇರಿದವರು. ಐಶ್ವರ್ಯಾ ಅವರು ನನ್ನ ತಂದೆಯ ಜತೆಯಲ್ಲಿ ನಟಿಸಿದವರು ಎಂಬ ಮಾರ್ಮಿಕವಾದ ಹೇಳಿಕೆ ನೀಡಿದ್ದು ಹಲವರ ಕೆಂಗಣ್ಣಿಗೆ ಕಾರಣವಾಯ್ತು.
 
ಇನ್ನು  ಪ್ಲೇಯರ್ಸ್ ಚಿತ್ರದಲ್ಲಿ ಸೋನಮ್ ತಮ್ಮ ಮಧ್ಯದ ಬೆರಳನ್ನು ತೋರಿಸಿರುವುದು. ಹಾಗೂ ಇದಕ್ಕೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು... ಅಲ್ಲದೇ ಸುದ್ದಿಗೋಷ್ಠಿಯೊಂದರಲ್ಲಿ ಈ ಬಗ್ಗೆ ಸೆನ್ಸಾರ್ ಮಂಡಳಿಯಲ್ಲಿ ನನಗೆ ನಂಬಿಕೆಯಿಲ್ಲ. ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿ, ಪಡಿಸದಿರಲಿ ಅದರ ಬಗ್ಗೆ ನಾನು ಕೇರ್ ಮಾಡಲ್ಲ. ಜನ ನನ್ನ ಚಿತ್ರವನ್ನು ಬಂದು ನೋಡಿದರೆ ಸಾಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
 
webdunia
ಫೈಂಡಿಂಗ್ ಫ್ಯಾನಿ ಚಿತ್ರದ ಒಂದು ಸೀನ್ ನಲ್ಲಿ ದೀಪಿಕಾ ಪಡುಕೋಣೆಯವರ cleavage ಕಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಾಗೂ ಈ ಬಗ್ಗೆ ದೀಪಾಕಾಳ ಖಡಕ್ ಪ್ರತಿಕ್ರಿಯೆ ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಯ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ಬಗ್ಗೆ ಬಾಯ್ಬಿಟ್ಟ ರವಿತೇಜಾ