Select Your Language

Notifications

webdunia
webdunia
webdunia
webdunia

ಸಹೋದರನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ಬಗ್ಗೆ ಬಾಯ್ಬಿಟ್ಟ ರವಿತೇಜಾ

ಸಹೋದರನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ಬಗ್ಗೆ ಬಾಯ್ಬಿಟ್ಟ ರವಿತೇಜಾ
ಹೈದ್ರಾಬಾದ್ , ಸೋಮವಾರ, 3 ಜುಲೈ 2017 (18:13 IST)
ರವಿತೇಜಾ.. ಟಾಲಿವುಡ್`ನ ಮಾಸ್ ಮಹಾರಾಜ. ತನ್ನ ವಿಶಿಷ್ಟ ನಟನೆ ಮೂಲಕ ತನ್ನದೇ ಅಭಿಮಾನಿ ಬಳಗ ಹೊಂದಿರುವ ರವಿತೇಜಾ ಇತ್ತೀಚೆಗೆ ಅಭಿಮಾನಿಗಳಿಂದ ಭಾರೀ ಆಕ್ರೋಶಕ್ಕೆ ಒಳಗಾಗಿದ್ದರು. ಹೌದು, ಸಹೋದರ ಭರತ್ ರಾಜು ಕಾರು ಅಪಘಾತದಲ್ಲಿ ನಿಧಾನರಾಗಿದ್ದರು. ಆದರೆ, ರವಿತೇಜಾ ಅಂತ್ಯ ಸಂಸ್ಕಾರಕ್ಕೆ ಹೋಗಿರಲಿಲ್ಲ. ರವಿತೇಜಾರ ಈ ನಡೆ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
 

ರವಿತೇಜಾ ಸಹೋದರ 45 ವರ್ಷದ ಭರತ್ ರಾಜು ಕಾರು ಹೈದ್ರಾಬಾದ್`ನಲ್ಲಿ ನಿಂತಿದ್ಧ ಕಾರಿಗೆ ಡಿಕ್ಕಿ ಹೊಡೆದು ಭರತ್ ರಾಜು ಮೃತಪಟ್ಟಿದ್ದರು. ಜುಬಿಲಿ ಹಿಲ್ಸ್`ನ ಮಹಾಪ್ರಸ್ಥಾನಂನಲ್ಲಿ ಭರತ್ ರಾಜು ಅಂತ್ಯಸಂಸ್ಕಾರ ನಡೆದಿತ್ತು.

ಈ ಬಗ್ಗೆ ಹಲವು ದಿನಗಳಿಂದ ಮೌನ ವಹಿಸಿದ್ದ ರವಿತೇಜಾ ಕೊನೆಗೂ ಮೌನ ಮುರಿದಿದ್ದಾರೆ. ಭರತ್ ಸಾವಿನ ವಿಷಯ ಕೇಳಿ ನನ್ನ ಕುಟುಂಬ ಆಘಾತಕ್ಕೊಳಗಾಗಿದೆ. ನನ್ನ ತಂದೆಗೆ 85 ವರ್ಷ, ಹಲವು ಆರೋಗ್ಯದ ಸಮಸ್ಯೆಗಳಿವೆ. ಭರತ್ ಸಾವಿನ ಸುದ್ದಿ ಕೇಳಿ ಮತ್ತಷ್ಟು ಕುಸಿದು ಹೋಗಿದ್ದಾರೆ. ನನ್ನ ತಾಯಿ ಸಹ ಕುಸಿದು ಹೋಗಿದ್ದಾರೆ. ನಮ್ಮ ಕೈಲಾದಷ್ಟೂ ಅವರನ್ನ ಸಂತೈಸಿದ್ದೇವೆ. ಅವರು ಸಹಜ ಸ್ಥಿತಿಗೆ ಬರಲು ಎಷ್ಟು ದಿನಗಳಾಗುತ್ತದೋ ಗೊತ್ತಿಲ್ಲ.

ಅಪಘಾತದಲ್ಲಿ ಭರತ್ ರಾಜು ಮುಖ ಸಂಪೂರ್ಣ ಡ್ಯಾಮೇಜ್ ಆಗಿತ್ತು. ಮತ್ತೊಬ್ಬ ಸಹೋದರ ರಘು ಆಸ್ಪತ್ರೆಯಲ್ಲಿ ಅವನನ್ನ ನೋಡಿ ಬಂದಿದ್ದ. ಮುಖ ಡ್ಯಾಮೇಜ್ ಆಗಿದ್ದು, ನಾವ್ಯಾರೂ ಆ ಸ್ಥಿತಿಯಲ್ಲಿ ನೋಡುವುದ ಬೇಡವೆಂದು ಹೇಳಿದ್ದ. ಻ಷ್ಟು ಮಾತ್ರವಲ್ಲದೆ, ನಾನು ಸತ್ತವರ ಮುಖ ನೋಡುವುದಿಲ್ಲ. ನನಗೆ ಈ ಫೋಬಿಯಾ ಇದೆ. ಚಿತ್ರರಂಗದ ದೊಡ್ಡ ಮನುಷ್ಯರು ನಿಧನರಾದರೂ ನಾನು ಅವರ ಮುಖ ನೋಡುವುದಿಲ್ಲ. ಹೀಗಾಗಿ, ಸಹೋದರನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಯಾರಿಗೂ ಇಲ್ಲದ ಸವಲತ್ತು ಸಂಜಯ್ ದತ್ ಗೆ ಯಾಕೆ ಕೊಟ್ಟಿರಿ?’