Select Your Language

Notifications

webdunia
webdunia
webdunia
webdunia

ಅಬ್ಬರಿಸಲು ರೆಡಿಯಾಗಿದೆ ಹೆಬ್ಬುಲಿ

ಹೆಬ್ಬುಲಿ ಸುದೀಪ್
ಸುದೀಪ್ ಅವರು ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಹೆಬ್ಬುಲಿ. ಈ ಸಿನಿಮಾದಲ್ಲಿ ಸುದೀಪ್ ಅವರ ಗೆಟಪ್ ಹೇಗಿರುತ್ತ. ಅವರದ್ದು ಯಾವ ರೀತಿ ಪಾತ್ರವಿರಬಹುದು ಅಂತಾ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಲೇ ಇದ್ದರು.ಆದ್ರೀಗ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹೆಬ್ಬುಲಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

 
ಅಂದ್ಹಾಗೆ ಸುದೀಪ್ ಅವರು ಹೆಬ್ಬುಲಿ ಸಿನಿಮಾದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಮೊದಲ ಬಾರಿಗೆ ಸುದೀಪ್ ಅವರು ಈ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ಸದ್ಯ ರಿಲೀಸ್ ಆಗಿರುವ ಸಿನಿಮಾದ ಪೋಸ್ಟರ್ ನಲ್ಲೂ ಸುದೀಪ್ ಅವರು ಪ್ಯಾರಾ ಕಮಾಂಡೋ ಲುಕ್‌ನಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.

ಈ ಹಿಂದೆ 'ಗಜಕೇಸರಿ' ಚಿತ್ರದಲ್ಲಿ ಯಶ್ಗೆೆ ಹೇರ್‌ಸ್ಟೈಲ್‌ ಮಾಡಿದ್ದ ಅಲೆಕ್ಸ್ ಅವರೇ ಸುದೀಪ್ಗೂ  ಈ ಚಿತ್ರದಲ್ಲಿ ವಿಭಿನ್ನವಾದ ಹೇರ್‌ಸ್ಟೈಲ್‌ ಮಾಡಿರುವುದು ವಿಶೇಷ. ಛಾಯಾಗ್ರಾಹಕ ಕೃಷ್ಣ ನಿರ್ದೇಶನದ 'ಹೆಬ್ಬುಲಿ'ಯ ಚಿತ್ರೀಕರಣ ಈಗಾಗಲೇ ಶುರುವಾಗಿದೆ. 
 
120 ದಿನಗಳ ಕಾಲ 'ಹೆಬ್ಬುಲಿ' ಚಿತ್ರೀಕರಣ ಮಾಡಲು  ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಕಾಶ್ಮೀರ, ಮೈಸೂರು, ಬಳ್ಳಾರಿ, ಬೆಂಗಳೂರು ಹಾಗೂ ಐಸ್ಲ್ಯಾಂ ಡ್, ನಾರ್ವೆಯಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರ ತಂಡಕ್ಕಿದೆ. ಚಿತ್ರದಲ್ಲಿ ರವಿಚಂದ್ರನ್, ಸುದೀಪ್ ಅಣ್ಣನಾಗಿ ನಟಿಸುತ್ತಿದ್ದು, ಸುಮಾರು 30 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ. 
 
ಉಳಿದಂತೆ ಸಂಪತ್ರಾನಜ್, ರವಿಶಂಕರ್, ಚಿಕ್ಕಣ್ಣ ಹಾಗೂ 'ವೇದಾಳಂ' ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸುತ್ತಿದ್ದಾರೆ. ಇನ್ನು, ಅಮಲಾ ಪೌಲ್ ಅವರು ಸುದೀಪ್‍ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕೃಷ್ಣ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿ, ನಿರ್ದೇಶನವನ್ನು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕತ್ತಿ ಸಿನಿಮಾದ ರಿಮೇಕ್ ನಲ್ಲಿ ಅಭಿನಯಿಸುತ್ತಲ್ಲವಂತೆ ದೀಪಿಕಾ ಪಡುಕೋಣೆ