Publish Date: Fri, 10 Jun 2016 (10:25 IST)
Updated Date: Fri, 10 Jun 2016 (10:30 IST)
ಹಾಲಿವುಡ್ ನ xxx ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್ ಸಿನಿಮಾದಲ್ಲಿ ಅಭಿನಯಿಸಿ ದೀಪಿಕಾ ಅವರು ಮುಂಬೈಗೆ ಆಗಮಿಸುತ್ತಿದ್ದಂತೆ ದೀಪಿಕಾ ಅವರು ಆ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.ಅದರಲ್ಲೂ ದೀಪಿಕಾ ಅವರು ತೆಲುಗು ಸಿನಿಮಾವೊಂದರಲ್ಲಿ ಅಭಿನಯಿಸುತ್ತಾರೆ ಅನ್ನೋದು ಬಹು ದೊಡ್ಡ ಸುದ್ದಿಯಾಗಿತ್ತು.ಆದ್ರೀಗ ಅದಕ್ಕೆ ತೆರ ಬಿದ್ದದೆ.
ಕಾಲಿವುಡ್ ನಲ್ಲಿ ಎ.ಆರ್ ಮುಗರುಗದಾಸ್ ಅವರು ನಿರ್ದೇಶನ ಮಾಡಿದ ಕತ್ತಿ ಸಿನಿಮಾ ಕತ್ತಿಲಾಂತೋಡು ಅಂತಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆಯಂತೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅಂತಾ ಸುದ್ದಿಯಾಗಿತ್ತು.
ಆದರೆ ದೀಪಿಕಾ ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅನ್ನೋದು ಇದೀಗ ಕನ್ಫೂರ್ಮ್ ಆಗಿದೆ.ದೀಪಿಕಾ ಅವರು ನಾನು ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅಂತಾ ಹೇಳಿದ್ದಾರೆ.
ಇನ್ನು ಈಗಾಗಲೇ ಸಂಜಯ್ ಲೀಲಾ ಬನ್ಸಾಲಿ ಅವರ ಎರಡು ಸಿನಿಮಾಗಳಲ್ಲಿ ಅಭಿನಯಿಸಿರುವ ದೀಪಿಕಾ ಅವರು ಸಂಜಯ್ ಲೀಲಾ ಅವರ ಮುಂದಿನ ಸಿನಿಮಾದಲ್ಲೂ ಅಭಿನಯಿಸುತ್ತಾರೆ ಅಂತಾ ಹೇಳಲಾಗುತ್ತಿದೆ. ಬನ್ಸಾಲಿ ಅವರ ಪದ್ಮಾವತಿ ಸಿನಿಮಾದಲ್ಲಿ ದಿಪ್ಪಿ ಪದ್ಮಾವತಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.
ಅಲ್ಲದೇ ಆನಂದ್ ಆನಂದ್ ಎಲ್ ರೈ ಅವರ ಮುಂದಿನ ಸಿನಿಮಾದಲ್ಲೂ ದೀಪಿಕಾ ಅವರು ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ