ಹಿರಿಯ ನಟ ರಿಷಿ ಕಪೂರ್ ಗಾಂಧಿ -ನೆಹರು ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡುವುದರ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿರುವ ರಿಷಿ ಕಪೂರ್. ದೇಶದ ಪ್ರತಿಯೊಂದು ಸಂಪತ್ತು ಗಾಂಧಿ ಹಾಗೂ ನೆಹರು ಹೆಸರಲ್ಲಿ ಯಾಕಿದೆ? ಎಂದು ಕೇಳಿದ್ದಾರೆ.
ಪ್ರಸ್ತುತ ಸರ್ಕಾರವನ್ನು ಮನವಿ ಮಾಡಿರುವ ರಿಷಿ ಕಪೂರ್, ದೇಶದ ಸಂಪತ್ತುಗಳಲ್ಲಿ ಇರುವಂತಹ ಹೆಸರುಗಳನ್ನು ಬದಲಾವಣೆ ಮಾಡುವಂತೆ ಕೇಳಿ ಕೊಂಡಿದ್ದಾರೆ. ಸಮಾಜಕ್ಕೆ ಕೊಡುಗೆ ನೀಡಿರುವ ವ್ಯಕ್ತಿಗಳ ಹೆಸರುಗಳನ್ನು ಮರು ನಾಮಕರಣ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಕಾಂಗ್ರೆಸ್‌ನ ಗಾಂಧಿ ಪರಿವಾರದ ಹೆಸರಲ್ಲಿ ಇಟ್ಟಿರುವಂತಹ ದೇಶದ ಪ್ರಮುಖ ರಸ್ತೆ, ವಿಮಾನ ನಿಲ್ದಾಣ.. ಐತಿಹಾಸಿಕ ತಾಣಗಳ ಹೆಸರು ಬದಲಾವಣೆ ಮಾಡಬೇಕು... ಬಾದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಲತಾ ಮಂಗೇಶ್ಕರ್ ಅಥವಾ ಜೆಆರ್‌ಟಿ ಟಾಟಾ ಲಿಂಕ್ ರಸ್ತೆ ಹೆಸರಿಸುವಂತೆ ಕೋರಿದ್ದಾರೆ.
ಇದೇ ವೇಳೆ' 'ಬಾಪ್ ಕಾ ಮಾಲ್ ಸಮಛಾ ರಖಾ ಥಾ' ಎಂದು ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇಂದಿರಾ ಗಾಂಧಿ ಹೆಸರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇಕೆ? ಆದ್ರೆ ಅಲ್ಲಿ ಮಹಾತ್ಮ ಗಾಂಧಿ ಹಾಗೂ ಭಗತ್ ಸಿಂಗ್ ಹೆಸರೇಕೆ ಇಲ್ಲ. ಅಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ನನ್ನ ಹೆಸರಲ್ಲಿ ಯಾಕೆ ನಾಮಕರಣ ಮಾಡಿಲ್ಲ ಎಂದು ರಿಷಿ ಕಪೂರ್ ಪ್ರಶ್ನೆ ಮಾಡಿದ್ದಾರೆ.
ಅದಲ್ಲದೇ ಫಿಲ್ಮಂ ಸಿಟಿ ಹೆಸರು ದಿಲೀಪ್‌ಕುಮಾರ್, ದೇವಾನಂದ, ಅಶೋಕ್ ಕುಮಾರ್, ಅಥವಾ ಅಮಿತಾಬ್ ಬಚ್ಚನ್ ಹೆಸರಲ್ಲಿ ಇರಬೇಕು ಎಂದು ಒತ್ತಾಯ ಮಾಡಿರುವ ಅವರು,. ಇನ್ನೂ ಪ್ರಮುಖ ಪೌರಾಣಿಕ ಐತಿಹಾಸಿಕ ತಾಣಗಳಲ್ಲಿ ಮೊಹಮ್ಮದ್ ರಫಿ, ಮುಕೇಶ್, ಕಿಶೋರ್ ಕುಮಾರ್ ಹೆಸರುಗಳನ್ನು ಮರು ನಾಮಕರಮ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.