Webdunia - Bharat's app for daily news and videos

Install App

3 ದಿನದಲ್ಲಿ 100 ಕೋಟಿ ಕಮಾಯಿ ಮಾಡಿದ ಫೈಟರ್

Krishnaveni K
ಶನಿವಾರ, 27 ಜನವರಿ 2024 (12:02 IST)
ಮುಂಬೈ: ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಫೈಟರ್ ಸಿನಿಮಾ ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.

ಬಿಡುಗಡೆಯಾದ ಮೊದಲ ದಿನವೇ ಫೈಟರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಬುಕ್ ಮೈ ಶೋನಲ್ಲೂ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು. ಇದೀಗ ಗಣರಾಜ್ಯೋತ್ಸವ ನಿಮಿತ್ತ ಲಾಂಗ್ ವೀಕೆಂಡ್ ಕೂಡಾ ಸಿಕ್ಕಿರುವುದರಿಂದ ಫೈಟರ್ ಸಿನಿಮಾ ಗಳಿಕೆಯೂ ಭಾರೀ ಜೋರಾಗಿದೆ.

ಮೊದಲ ದಿನ ಚಿತ್ರ 22.50 ಕೋಟಿ ರೂ. ಗಳಿಕೆ ಮಾಡಿತ್ತು. ಇತ್ತೀಚೆಗಿನ ದಿನಗಳಲ್ಲಿ ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಎನಿಸಿದರೂ ಎರಡನೇ ದಿನ ಭರ್ಜರಿ ಗಳಿಕೆ ಮಾಡಿ ಆ ನಿರಾಸೆ ಮರೆಸಿದೆ. ಎರಡನೇ ದಿನ ಗಣರಾಜ್ಯೋತ್ಸವದಂದು ಚಿತ್ರ ಬರೋಬ್ಬರಿ 39 ಕೋಟಿ ರೂ. ಬಾಚಿಕೊಂಡಿದೆ.

ಫೈಟರ್ ಸಿನಿಮಾದಲ್ಲಿ ದೀಪಿಕಾ ಮತ್ತು ಹೃತಿಕ್ ಇಬ್ಬರೂ ವಾಯುಪಡೆ ಪೈಲಟ್ ಗಳಾಗಿ ಕಾಣಿಸಿಕೊಂಡಿದ್ದಾರೆ. ದೇಶ ಪ್ರೇಮ ಕುರಿತ ಕತೆ ಹೊಂದಿರುವ ಸಿನಿಮಾದಲ್ಲಿ ಪಡ್ಡೆ ಹೈಕಗಳಿಗೆ ಇಷ್ಟವಾಗುವಂತೆ ಸಾಕಷ್ಟು ಬೋಲ್ಡ್ ಸೀನ್ ಗಳೂ ಇವೆ. ಇದೀಗ ಚಿತ್ರದ ಒಟ್ಟು ಗಳಿಕೆ 61.50 ಕೋಟಿ ರೂ. ತಲುಪಿದ್ದು, ಇಂದೂ ಇದೇ ರೀತಿ ಕಮಾಯಿ ಮಾಡಿದರೆ 100 ಕೋಟಿ ರೂ. ಕ್ಲಬ್ ಸೇರ್ಪಡೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಮುಂದಿನ ಸುದ್ದಿ
Show comments