Publish Date: Wed, 27 May 2020 (08:59 IST)
Updated Date: Wed, 27 May 2020 (09:01 IST)
ಮುಂಬೈ: ಕಾರ್ಮಿಕರು ತವರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದೇ ಬಾಲಿವುಡ್ ನಟ ಸೋನು ಸೂದ್ ಗೆ ಮುಳುವಾಗಿದೆ. ಈಗ ನೆಟ್ಟಿಗರು ದಿನಕ್ಕೊಂದು ಚಿತ್ರ ವಿಚಿತ್ರ ಬೇಡಿಕೆಯಿಡುತ್ತಿದ್ದಾರೆ.
ಮೊನ್ನೆಯಷ್ಟೇ ನೆಟ್ಟಿಗನೊಬ್ಬ ನನಗೆ ಮದ್ಯದಂಗಡಿ ತೆರಳಲು ಸಹಾಯ ಮಾಡಿ ಎಂದು ಸೋನು ಸೂದ್ ಗೆ ಟ್ವೀಟ್ ಮಾಡಿ ಕೋರಿದ್ದ. ಇದಕ್ಕೆ ಸೋನು ಸೂದ್ ಕೂಡಾ ಮದ್ಯದಂಗಡಿಯಿಂದ ಮನೆಗೆ ತೆರಳಲು ಬೇಕಾದರೆ ಸಹಾಯ ಮಾಡುತ್ತೇನೆ. ಕರೆ ಕಳುಹಿಸು ಎಂದು ತಮಾಷೆ ಮಾಡಿದ್ದರು.
ಅದಾಗಿ ದಿನ ಕಳೆಯುವಷ್ಟರಲ್ಲಿ ಮತ್ತೊಬ್ಬ ನೆಟ್ಟಿಗ ಸೋನು ಸೂದ್ ಗೆ ಗರ್ಲ್ ಫ್ರೆಂಡ್ ಜತೆ ಸೇರಲು ಸಹಾಯ ಕೋರಿದ್ದಾನೆ! ಗರ್ಲ್ ಫ್ರೆಂಡ್ ಬಿಹಾರದಲ್ಲಿದ್ದಾಳೆ. ಅವಳನ್ನು ಕರೆತರಲು ಸಹಾಯ ಮಾಡಿ ಎಂದು ಕೋರಿದ್ದಾನೆ. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ಸೋನು ಸೂದ್ ‘ಇಬ್ಬರೂ ಸದ್ಯಕ್ಕೆ ದೂರ ದೂರವೇ ಇರಿ. ಅದುವೇ ಒಳ್ಳೆಯದು. ನಿಮ್ಮಿಬ್ಬರ ಸಂಬಂಧಕ್ಕೆ ಈಗ ಆಸಿಡ್ ಟೆಸ್ಟ್ ಕಾಲ’ ಎಂದು ಟೀಸ್ ಮಾಡಿದ್ದಾರೆ.