Select Your Language

Notifications

webdunia
webdunia
webdunia
webdunia

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸ್ಟಾರ್ ಹೀರೋ ಪುತ್ರ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸ್ಟಾರ್ ಹೀರೋ ಪುತ್ರ
Mumbai , ಶುಕ್ರವಾರ, 16 ಡಿಸೆಂಬರ್ 2016 (10:00 IST)
ಬಾಲಿವುಡ್ ಚಿತ್ರರಸಿಕರಿಗೆ ಇಮ್ರಾನ್ ಹಸ್ಮಿ ಹೆಸರು ಗೊತ್ತೇ ಇರುತ್ತೆ. ರೊಮ್ಯಾಂಟಿಕ್ ಸೀನ್‌ಗಳಲ್ಲಿ ತನ್ನದೇ ಛಾಪು ಮೂಡಿಸಿದ ನಟ. ಅದರಲ್ಲೂ ಕಿಸ್ಸಿಂಗ್ ಬಾಯ್ ಎಂದೇ ಗುರುತಿಸಿಕೊಂಡವನು. ಈ ಹೀರೋಗೆ ಐದು ವರ್ಷದ ಪುತ್ರನಿದ್ದು, ಪಾಪ ಆ ಮಗು ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದೆ.
 
ಈ ವಿಷಯನ್ನು ಇಮ್ರಾನ್ ಹಸ್ಮಿ ಸ್ವತಃ ಹೇಳಿದ್ದಾರೆ. ನಮಗೆ ಈ ವಿಷಯ ಗೊತ್ತಾದಾಗ ಚಿಂತೆಗೀಡಾಗಿದ್ದೆವು. ತಲೆಯಲ್ಲಿ ನಾನಾ ಆಲೋಚನೆಗಳು ಬರುತ್ತಿದ್ದವು ಎಂದಿದ್ದಾರೆ ಇಮ್ರಾನ್. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಷಯ ಹಂಚಿಕೊಂಡಿದ್ದಾರೆ.
 
2014ರಲ್ಲಿ ಪುತ್ರನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಸಾಕಷ್ಟು ಒದ್ದಾಡಿದೆವು. ನಮಗೇ ಈ ರೀತಿ ಯಾಕಾಯಿತು ಎಂದು ನೋವನುಭವಿಸಿದೆವು. ಈಗ ಆ ನೋವಿನಿಂದ ಹೊರಬಂದು ಮಗನಿಗೆ ಚಿಕಿತ್ಸೆ ಮಾಡಿಸುತ್ತಿದ್ದೇವೆಂದು, ಅದರಿಂದ ಪೂರ್ಣ ಪ್ರಮಾಣದಲ್ಲಿ ವಾಸಿಯಾಗದಿದ್ದರೂ ಇನ್ನು ನಾಲ್ಕು ವರ್ಷ ಬದುಕಬಹುದಷ್ಟೇ. ತನ್ನ ಮಗನನ್ನು ಬದುಕಿಸಿಕೊಳ್ಳಲು ಎಷ್ಟೇ ಕಷ್ಟ ಆದರೂ ಭರಿಸುತ್ತೇನೆ  ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್ ಹೀರೋಯಿನ್ ಮನೆ ಮೇಲೆ ಐಟಿ ದಾಳಿಗೆ ಸ್ಕೆಚ್