Select Your Language

Notifications

webdunia
webdunia
webdunia
webdunia

ಟಾಪ್ ಹೀರೋಯಿನ್ ಮನೆ ಮೇಲೆ ಐಟಿ ದಾಳಿಗೆ ಸ್ಕೆಚ್

ನಟಿ ನಯನತಾರಾ
Chennai , ಗುರುವಾರ, 15 ಡಿಸೆಂಬರ್ 2016 (13:16 IST)
ಕೋಲಿವುಡ್ ಮತ್ತು ಟಾಲಿವುಡ್‍ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ಯಾರು ಎಂದರೆ ಅದು ನಯನತಾರಾ ಮಾತ್ರ ಎಂಬ ಉತ್ತರ ಸಿಗುತ್ತದೆ. ಈ ಬ್ಯೂಟಿ ಸಿನಿಮಾ ಒಂದಕ್ಕೆ ಮೂರು ಕೋಟಿ ಎಣಿಸುತ್ತಾರೆ ಎಂಬುದು ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿರುವ ಮಾತು.
 

ಇದರಲ್ಲಿ ಅರ್ಧ ಕಪ್ಪು, ಇನ್ನರ್ಧ ಬಿಳಿ ಹಣವಾಗಿ ತೆಗೆದುಕೊಳ್ಳುವುದು ನಯನತಾರಾ ಮಾಡುತ್ತಿರುವ ಕೆಲಸ. ಈಗ ಅಧಿಕ ಮೌಲ್ಯದ ನೋಟುಗಳು ರದ್ದಾದ ಮೇಲೆ ಮನೆಯಲ್ಲಿ ಇಟ್ಟುಕೊಂಡಿದ್ದ ಕಪ್ಪು ಹಣ ಬಿಳಿ ಮಾಡಲು ಹೊರಟಿದ್ದರಂತೆ. ಇದಕ್ಕಾಗಿ ನಿರ್ಮಾಪಕರೊಬ್ಬರಿಗೆ ದುಂಬಾಲು ಬಿದ್ದಿದ್ದಾರೆ ನಯನತಾರಾ ಎನ್ನುತ್ತವೆ ಮೂಲಗಳು. 
 
ಈಗ ಕೊಡುತ್ತಿರುವ ಸಂಭಾವನೆಯನ್ನೂ ವೈಟ್ ಮಾಡಿಕೊಡಿ ಎಂದು ಹೇಳುತ್ತಿದ್ದಾರಂತೆ. ಮೊದಲೇ ನಿರ್ಮಾಪಕರು ಗೋಳು ಕೇಳುವಂತಿಲ್ಲ. ಅದರಲ್ಲೂ ಈ ರೀತಿಯಲ್ಲಾ ಟಾರ್ಚರ್ ಕೊಡುತ್ತಿರುವ ಬಗ್ಗೆ ನಿರ್ಮಾಪಕರಿಗೆ ಒಳಗೊಳಗೆ ಕುದಿಯುತ್ತಿದೆಯಂತೆ. ಹೇಗಾದರೂ ಮಾಡಿ ಆದಾಯ ತೆರಿಗೆ ಅಧಿಕಾರಿಗಳಿಗೆ ಹಿಡಿದುಕೊಡಲು ಪ್ಲಾನ್ ಮಾಡುತ್ತಿದ್ದಾರೆ ಎಂಬುದು ಸುದ್ದಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಮೇಲಿನ ಜೋಕುಗಳಲ್ಲಿ ರಜನಿಗೆ ಇಷ್ಟಪಟ್ಟಿದ್ದು