Select Your Language

Notifications

webdunia
webdunia
webdunia
webdunia

ಅಜರುದ್ದೀನ್ ಹೆಸರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಕೇಳಿ ಅಸಮಾಧಾನ ತಂದಿದೆ- ಇಮ್ರಾನ್ ಹಶ್ಮಿ

ಅಜರುದ್ದೀನ್ ಹೆಸರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಕೇಳಿ ಅಸಮಾಧಾನ ತಂದಿದೆ- ಇಮ್ರಾನ್ ಹಶ್ಮಿ
ಮುಂಬೈ , ಗುರುವಾರ, 28 ಏಪ್ರಿಲ್ 2016 (19:12 IST)
ನಾನು ಕ್ರಿಕೆಟಿಗ ಅಜುರುದ್ದೀನ್ ಅವರ ದೊಡ್ಡ ಅಭಿಮಾನಿ. ಅವರ ಹೆಸರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಕೇಳಿ ಬಂದಿದ್ದು ನನಗೆ ಅಸಮಾಧಾನ ತಂದಿದೆ ಎಂದು ನಟ ಇಮ್ರಾನ್ ಹಶ್ಮಿ ಹೇಳಿದ್ದಾರೆ. 

 
ಅಂದಹಾಗೆ ಅಜರ್ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಅಜುರುದ್ದೀನ್ ಪಾತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳ ಬಗ್ಗೆ ಮಾತನಾಡಿರುವ ಅವರು, ಚಿತ್ರದಲ್ಲಿ ಹಾಡುಗಳು ಎಲ್ಲರ ಗಮನ ಸೆಳೆಯುತ್ತವೆ ಎಂದಿದ್ದಾರೆ. 
 
2002ರಲ್ಲಿ ಮಾಜಿ ಕ್ರಿಕೆಟಿಗ ಅಜುರುದ್ದೀನ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅವರ ಹೆಸರು ಕೇಳಿಬಂದಿತ್ತು. ನಾನು ಅಜರ್ ಭಾಯ್ ದೊಡ್ಡ ಅಭಿಮಾನಿ, ಪ್ರಕರಣದಲ್ಲಿ ಯ್ಯಾರಾರು ಹಣವನ್ನು ಪಡೆದುಕೊಂಡಿದ್ದಾರೋ ಅದು ತಪ್ಪು ಎಂದು ತಿಳಿಸಿದ್ದಾರೆ ಇಮ್ರಾನ್ ಹಶ್ಮಿ.. 
 
ಅಜರುದ್ದೀನ್ 90ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರತಿನಿಧಿಸಿದ್ದರು 2000ರಲ್ಲಿ ಅವರು  ಮ್ಯಾಚ್ ಫಿಕ್ಸಿಂಗ್ ಸುಳಿಗೆ ಸಿಕ್ಕು ಭಾರತೀಯ ಕಣ್ಣಲ್ಲಿ ಸಣ್ಣವರಾದರು. ಅವರಿಗೆ ಆಜೀವ ಪರ್ಯಂತ ಕ್ರಿಕೆಟ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಯಿತು. 
 
ಆ ಬಳಿಕ ರಾಜಕೀಯದಲ್ಲಿ ತಮಗೊಂದು ಸ್ಥಾನ ಕಾಂಗ್ರೆಸ್ ಪಕ್ಷದ ಮೂಲಕ ಗಳಿಸಿಕೊಂಡ ಅಜರ್ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಗೀತ ಬಿಜಲಾನಿ ಪಾತ್ರದಲ್ಲಿ ನರ್ಗೀಸ್ ಫಕ್ರಿ, ಅವರ ಮೊದಲ ಪತ್ನಿ ನೌರೆನ್ ಪಾತ್ರದಲ್ಲಿ ಪ್ರಾಚಿ ದೇಸಾಯಿ ನಟಿಸುತ್ತಿದ್ದಾರೆ. 
 
ಇದನ್ನು ಟೋನಿ ಡಿಸೋಜ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು  ಬಾಲಾಜಿ ಮೋಶನ್ ಪಿಕ್ಚರ್ಸ್ ಹಾಗೂ ಎಂಎಸ್ ಎಂ ಮೋಶನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು. ಮುಂದಿನ ವರ್ಷ ಮೇ 13ಕ್ಕೆ ಚಿತ್ರ ಬಿಡುಗಡೆ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ರಾಯಭಾರಿ, ಬೆಂಬಲ ನೀಡಿದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ