ಸಲ್ಮಾನ್ ಖಾನ್ ಗುಡ್‌ವಿಲ್‌ಗೆ ರಾಯಭಾರಿಯಾಗಿರುವುದರ ಬಗ್ಗೆ ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ರಿಯೊ ಒಲಿಂಪಿಕ್ಸ್‌ಗೆ ಭಾರತ ತಂಡ ಪರವಾಗಿ ಆಯ್ಕೆಯಾಗಿರುವುದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಯಾಕಂದ್ರೆ ಸಲ್ಮಾನ್ ಅವರು ಅಲ್ಲಿದ್ರೆ ಎಲ್ಲ ಕಡೆಯಲ್ಲೂ ಗ್ಲಾಮರ್ ಆಗುತ್ತದೆ. ಅದರಿಂದ ಹೆಚ್ಚಿನ ಪ್ರೇಕ್ಷಕರನ್ನು ನಾವು ಪಡೆಯಲು ಸಾಧ್ಯ ಎಂದಿದ್ದಾರೆ. ಸಲ್ಮಾನ್ ಅವರ ಜನಪ್ರಿಯತೆಯನ್ನು ನಾವು ಮರೆಯುವಂತಿಲ್ಲ.. ಆದ್ದರಿಂದ ಅವರು ಇಲ್ಲಿಗೆ ಬಂದ್ರೆ ರಿಯೊ ಒಲಿಂಪಿಕ್ಸ್‌ನ್ನು ಹೆಚ್ಚಿನ ಪ್ರೇಕ್ಷಕರು ನೋಡುತ್ತಾರೆ.
ಅವರೊಬ್ಬ ಮನೋರಂಜಕರಾಗಿದ್ದಾರೆ. ಆದಕಾರಣ ಅವರನ್ನು ಆಯ್ಕೆ ಮಾಡಿರುವುದು ಉತ್ತಮ ಸಂಗತಿ. ಇನ್ನೂ ಗುಡ್‌ವಿಲ್ ಅಂಬಾಸಿಡರ್‌ರನ್ನಾಗಿ ಬೇರೆಯರನ್ನು ಸಹ ಇಡಬಹುದು. ಇನ್ನೂ ಬಹಳಷ್ಟು ಅಥ್ಲೀಟ್‌ಗಳು ನಮ್ಮಲ್ಲಿದ್ದಾರೆ. ಅವರೆಲ್ಲಾ ಸಲ್ಮಾನ್ ಜತೆಗೆ ಕೈ ಜೋಡಿಸಬಹುದು ಎಂದು ಸಲಹೆ ನೀಡಿದ್ದಾರೆ.